×
Ad

ಫೆ. 2ರಂದು ಜಾರ್ಖಂಡ್ ಪ್ರವೇಶಿಸಲಿರುವ ʼಭಾರತ್ ಜೋಡೊ ನ್ಯಾಯ ಯಾತ್ರೆ’

Update: 2024-01-27 23:35 IST

Photo: facebook.com/rahulgandhi

ರಾಂಚಿ : ಕಾಂಗ್ರೆಸ್‌ನ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಫೆಬ್ರವರಿ 2ರಂದು ಜಾರ್ಖಂಡ್ ಪ್ರವೇಶಿಸಲಿದೆ ಹಾಗೂ ಪಾಕುರ್ ಜಿಲ್ಲೆಯಲ್ಲಿ ರಾಹುಲ್‌ಗಾಂಧಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜಾರ್ಖಂಡ್ ನಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಯಾತ್ರೆ 8 ದಿನಗಳಲ್ಲಿ 13 ಜಿಲ್ಲೆಗಳಲ್ಲಿ ಸಾಗಿ 804 ಕಿ.ಮೀ. ದೂರವನ್ನು ಕ್ರಮಿಸಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಯಾತ್ರೆಯ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಯಾತ್ರೆ ರಾಜ್ಯದ ಪಾಕುರ್ ಜಿಲ್ಲೆಗೆ ಫೆಬ್ರವರಿ 2ರಂದು ಪ್ರವೇಶಿಸಲಿದೆ ಎಂದು ಠಾಕೂರ್ ತಿಳಿಸಿದ್ದಾರೆ.

ಪಕ್ಷದ ಸಭೆ ಹಾಗೂ ರ್ಯಾಲಿ ಸ್ಥಳಗಳನ್ನು ಒಳಗೊಂಡ ಮಾರ್ಗ ನಕ್ಷೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಿದ್ಧತೆಯ ಪರಿಶೀಲನೆ ನಡೆಸಲು ಠಾಕೂರ್ ಹಾಗೂ ರಾಜ್ಯ ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News