ಉಪಚುನಾವಣೆ |ಜಮ್ಮುವಿನ ನಾಗ್ರೋಟಾ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗೆ ಗೆಲುವು, ಜುಬಿಲಿ ಹಿಲ್ಸ್ ನಲ್ಲಿ ಕಾಂಗ್ರೆಸ್, ನುವಾಪಾಡಾದಲ್ಲಿ ಬಿಜೆಪಿಗೆ ಮುನ್ನಡೆ
Photo credit: PTI
ಹೊಸದಿಲ್ಲಿ : ತೆಲಂಗಾಣದ ಜುಬಿಲಿ ಹಿಲ್ಸ್ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ನವೀನ್ ಕುಮಾರ್ ಯಾದವ್ ಬಿಆರ್‌ಎಸ್ ಅಭ್ಯರ್ಥಿ ಮಗಂತಿ ಸುನಿತಾ ಅವರಿಗಿಂತ 15,619 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ.
ನುವಾಪಾಡಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯ್ ಧೋಲಾಕಿಯಾ 63,522 ಮತಗಳ ಮುನ್ನಡೆ ಸಾಧಿಸಿದ್ದಾರೆ. 13 ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು, ಜಯ್ ಧೋಲಾಕಿಯಾ ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ 43,234 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
20,288 ಮತಗಳೊಂದಿಗೆ ಬಿಜೆಡಿಯ ಸ್ನೇಹಂಗಿನಿ ಚುರಿಯಾ ಎರಡನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘಾಸಿ ರಾಮ್ ಮಾಝಿ 20,103 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಜಮ್ಮುವಿನ ನಾಗ್ರೋಟಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವಯಾನಿ ರಾಣಾ 24,647 ಮತಗಳ ಅಂತರದ ಗೆಲುವನ್ನು ಸಾಧಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ದೇವಯಾನಿ ರಾಣಾ 42,350 ಮತಗಳನ್ನು ಪಡೆದು, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ ಅಭ್ಯರ್ಥಿ ಹರ್ಷ ದೇವ್ ಸಿಂಗ್ ಅವರನ್ನು ಸೋಲಿಸಿದರು.