×
Ad

ಕೇರಳ: ಸ್ವಾತಂತ್ರ್ಯೋತ್ಸವದಂದು ತ್ರಿವರ್ಣ ಧ್ವಜದ ಬದಲು ಕಾಂಗ್ರೆಸ್ ಧ್ವಜ ಹಾರಿಸಿದ ಸಿಪಿಎಂ!

Update: 2025-08-20 13:24 IST

Screengrab:X/@Nithinbabu97

ಕೊಚ್ಚಿ: ಸ್ವಾತಂತ್ರ್ಯೋತ್ಸವದಂದು ಕೇರಳದ ಎಲೂರ್ ನ ಸಿಪಿಐ (ಎಂ) ಶಾಖಾ ಸಮಿತಿಯು ತ್ರಿವರ್ಣ ಧ್ವಜದ ಬದಲು ಕಾಂಗ್ರೆಸ್ ಧ್ವಜ ಹಾರಿಸಿ ಮುಜುಗರಕ್ಕೀಡಾಗಿದ ಘಟನೆ ವರದಿಯಾಗಿದೆ.

ಪಕ್ಷದ ಮೂಲಗಳ ಪ್ರಕಾರ, ಸಿಪಿಐ (ಎಂ)ನ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸ್ಥಳೀಯ ನಾಯಕರೊಬ್ಬರು ತ್ರಿವರ್ಣ ಧ್ವಜದ ಬದಲಾಗಿ ಕಾಂಗ್ರೆಸ್ ಧ್ವಜವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ.

ಈ ಕಾರ್ಯಕ್ರಮದಲ್ಲಿ ಹಲವು ಸ್ಥಳೀಯ ನಾಯಕರು ಹಾಗೂ ಪಕ್ಷದ ಸದಸ್ಯರು ಪಾಲ್ಗೊಂಡಿದ್ದರು ಎಂದು ತಿಳಿಸಿದ ಪಕ್ಷದ ನಾಯಕರೊಬ್ಬರು, ಈ ಮುಜುಗರದ ಘಟನೆಯನ್ನು ದೃಢಪಡಿಸಿದ್ದಾರೆ.

ಧ್ವಜಾರೋಹಣ ನೆರವೇರಿದ ನಂತರವಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಈ ತಪ್ಪು ಗಮನಕ್ಕೆ ಬಂದಿತು ಎಂದು ಅವರು ಹೇಳಿದ್ದಾರೆ.

“ಕೇವಲ 10 ನಿಮಿಷಗಳ ಕಾಲ ಮಾತ್ರ ಕಾಂಗ್ರೆಸ್ ಧ್ವಜವನ್ನು ಹಾರಿಸಲಾಗಿತ್ತು. ಬಳಿಕ, ಅದನ್ನು ತಕ್ಷಣವೇ ಕೆಳಕ್ಕೆ ಇಳಿಸಲಾಯಿತು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News