×
Ad

ಕಾಂಗ್ರೆಸ್ ಸಿಬಿಐ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ತಳ್ಳಿತ್ತು, ಅದು ಕಠಿಣ ಸಮಯವಾಗಿತ್ತು: ಗೃಹಸಚಿವ ಅಮಿತ್ ಶಾ

Update: 2023-12-03 18:35 IST

 ಅಮಿತ್ ಶಾ | Photo: PTI 

ಅಹ್ಮದಾಬಾದ್: ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ತನ್ನನ್ನು ಬಂಧಿಸಿದ್ದ 2010 ಘಟನೆಯನ್ನು ಶನಿವಾರ ಇಲ್ಲಿ ನೆನಪಿಸಿಕೊಂಡ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ‘ಸಿಬಿಐ ಪ್ರಕರಣದಲ್ಲಿ ಕಾಂಗ್ರೆಸ್ ನನ್ನನ್ನು ಜೈಲಿಗೆ ಕಳುಹಿಸಿತ್ತು. ನನ್ನ ಪಾಲಿಗೆ ಅದು ಸಹಜವಾಗಿಯೇ ಕಷ್ಟದ ಅವಧಿಯಾಗಿತ್ತು’ ಎಂದು ಹೇಳಿದರು.

ಗುಜರಾತಿನ ಜುನಾಗಡದಲ್ಲಿ ರಾಜ್ಯದ ಮಾಜಿ ಸಚಿವ ದಿ.ದಿವ್ಯಕಾಂತ ನಾನಾವತಿಯವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಡನಾಡುತ್ತಿದ್ದ ಶಾ, ‘ನನ್ನನ್ನು ಜೈಲಿಗೆ ತಳ್ಳುವ ಕೇವಲ ಐದು ನಿಮಿಷಗಳ ಮುನ್ನ ನಾನು ಜೈಲು ಸಚಿವನಾಗಿದ್ದೆ. ದೇವರು ಯಾವುದೇ ವ್ಯಕ್ತಿಯನ್ನು ಅಧೋಗತಿಗಿಳಿಸಲು ಇದಕ್ಕಿಂತ ಒಳ್ಳೆಯ ಅವಕಾಶವನ್ನು ನೀಡಲು ಸಾಧ್ಯವಿರಲಿಲ್ಲ’ ಎಂದು ಹೇಳಿದರು.

1950ರ ದಶಕದಲ್ಲಿ ಸ್ಥಳೀಯ ಪೌರ ಸಂಸ್ಥೆಯ ಕೌನ್ಸಿಲರ್ ಮತ್ತು ಅಧ್ಯಕ್ಷರಾಗಿ ದಿ.ನಾನಾವತಿಯವರ ಕೊಡುಗೆಯನ್ನು ಶಾ ಪ್ರಶಂಸಿಸಿದರು. ಜುನಾಗಡದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ನಾನಾವತಿ ಚಿಮನ್ ಭಾಯಿ ಪಟೇಲ್ ನೇತೃತ್ವದ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದರು.

ನಾನಾವತಿಯವರ ಪುತ್ರ ಹಾಗೂ ಹಿರಿಯ ಹೈಕೋರ್ಟ್ ವಕೀಲ ನಿರುಪಮ ನಾನಾವತಿಯವರನ್ನೂ ಶಾ ಉಲ್ಲೇಖಿಸಿದರು. ಶಾ ಜೈಲು ಸೇರಿದಾಗ ನಾನಾವತಿ ಅವರ ಪರ ವಕೀಲರಾಗಿದ್ದರು.

‘ನಾನಾವತಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರೂ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು ಮತ್ತು ನಾನು ಪ್ರಕರಣವನ್ನು ಗೆಲ್ಲಲು ನೆರವಾಗಿದ್ದರು ’ ಎಂದು ಶಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News