×
Ad

ಬಿಜೆಪಿಗೆ ಸೇರ್ಪಡೆಯಾದ ತಮಿಳುನಾಡಿನ ಕಾಂಗ್ರೆಸ್‌ ಶಾಸಕಿ ಎಸ್‌. ವಿಜಯಧರಣಿ

Update: 2024-02-24 18:17 IST

ಎಸ್‌. ವಿಜಯಧರಣಿ | Photo: PTI 

ಹೊಸದಿಲ್ಲಿ: ತಮಿಳುನಾಡಿನ ವಿಲವಂಕೋಡ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಎಸ್‌. ವಿಜಯಧರಣಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಲ್‌. ಮುರುಗನ್, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಅವರ ಸಮ್ಮುಖದಲ್ಲಿ ವಿಜಯಧರಣಿ ಅವರು ಬಿಜೆಪಿಗೆ ಸೇರಿದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜಯಧರಣಿ ಅವರು ಮೂರು ಬಾರಿ ಶಾಸಕಿಯಾಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News