×
Ad

ಬಿಹಾರ | ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ; ಕಾಂಗ್ರೆಸ್ ಸಲ್ಲಿಸಿದ 89 ಲಕ್ಷ ದೂರುಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ : ಪವನ್ ಖೇರಾ ಆರೋಪ

Update: 2025-08-31 19:41 IST

ಪವನ್ ಖೇರಾ | PTI 

ಪಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್ ಪಕ್ಷದ ಮತಗಟ್ಟೆ ಏಜೆಂಟ್ ಗಳು 89 ಲಕ್ಷದಷ್ಟು ದೂರುಗಳನ್ನು ನೀಡಿದ್ದರೂ, ಅವೆಲ್ಲವನ್ನೂ ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ರವಿವಾರ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪವನ್ ಖೇರಾ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿರುವುದರಿಂದ, ಚುನಾವಣಾ ಆಯೋಗದ ಉದ್ದೇಶದ ಬಗ್ಗೆ ಸಂಶಯ ಮೂಡಿದ್ದು, ಇಡೀ ಪ್ರಕ್ರಿಯೆಯನ್ನು ಮತ್ತೊಮ್ಮೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

“ಚುನಾವಣಾ ಆಯೋಗವು ತನ್ನ ಮೂಲಗಳ ಮೂಲಕ ಯಾವುದೇ ಪಕ್ಷಗಳಿಂದ ದೂರುಗಳು ಬಂದಿಲ್ಲ ಎಂದು ಹೇಳುತ್ತಿದೆ. ಸತ್ಯವೆಂದರೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ 89 ಲಕ್ಷ ದೂರುಗಳನ್ನು ನೀಡಿದೆ” ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥರೂ ಆದ ಪವನ್ ಖೇರಾ ಆರೋಪಿಸಿದ್ದಾರೆ.

“ನಮ್ಮ ಮತಗಟ್ಟೆ ಏಜೆಂಟ್ ಗಳು ದೂರು ಸಲ್ಲಿಸಲು ತೆರಳಿದಾಗ, ಅವರ ದೂರುಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ದೂರುಗಳನ್ನು ವ್ಯಕ್ತಿಗಳಿಂದ ಮಾತ್ರ ಸ್ವೀಕರಿಸಲಾಗುತ್ತದೆಯೆ ಹೊರತು ರಾಜಕೀಯ ಪಕ್ಷಗಳಿಂದಲ್ಲ ಎಂದು ಚುನಾವಣಾ ಆಯೋಗ ನಮ್ಮ ಮತಗಟ್ಟೆ ಏಜೆಂಟ್ ಗಳಿಗೆ ತಿಳಿಸಿದೆ” ಎಂದೂ ಅವರು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News