×
Ad

ಮಗನನ್ನು ಕಳೆದುಕೊಂಡು ರೋದಿಸುತ್ತಿದ್ದ ಮಹಿಳೆಗೆ ಕಪಾಳಮೋಕ್ಷಗೈದ ಪೊಲೀಸ್‌ ಸಿಬ್ಬಂದಿ

Update: 2023-07-07 19:38 IST

Photo credit: thenewsminute.com 

ಭೋಪಾಲ್: ಹಾವು ಕಡಿತಕ್ಕೊಳಗಾಗಿದ್ದ ತನ್ನ 9 ವರ್ಷದ ಪುತ್ರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಾಗ ಆತನ ಮೃತದೇಹವನ್ನು ಅಪ್ಪಿಕೊಂಡು ರೋದಿಸುತ್ತಿದ್ದ ಮಹಿಳೆಯೊಬ್ಬಳಿಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಕಪಾಳಮೋಕ್ಷಗೈದ ಘಟನೆ ಶಹದೋಲ್‌ ಜಿಲ್ಲೆಯ ಜೈತ್ಪುರ್‌ ಎಂಬಲ್ಲಿಂದ ವರದಿಯಾಗಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸಲು ಅವನ ತಾಯಿ ನಿರಾಕರಿಸಿದಾಗ ಈ ಘಟನೆ ನಡೆದಿದೆ. ಆರೋಪಿ ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಎರಡು ದಿನಗಳ ಹಿಂದೆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಬದುಕುಳಿಸಲು ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಚಿಕಿತ್ಸೆ ಫಲಿಸದೆ ಆತ ಇಂದು ಮೃತಪಟ್ಟಿದ್ದ.

ಮಗನನ್ನು ಕಳೆದುಕೊಂಡ ಆ ತಾಯಿ ಆಸ್ಪತ್ರೆಯ ಹೊರಗೆ ರೋದಿಸುತ್ತಿದ್ದಾಗ ಪೊಲೀಸ್‌ ಸಿಬ್ಬಂದಿ ಸಂತೋಷ್‌ ಸಿಂಗ್‌ ಪರಿಹಾರ್‌ ಅಲ್ಲಿಗೆ ಆಗಮಿಸಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಹಸ್ತಾಂತರಿಸುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದರು, ಇದರಿಂದ ಕುಪಿತಗೊಂಡ ಪೊಲೀಸ್‌ ಸಿಬ್ಬಂದಿ ಆಕೆಗೆ ಹೊಡೆದಿದ್ದ.

ಆರೋಪಿ ಪೊಲೀಸ್‌ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಎಎಸ್‌ಪಿ ಮುಕೇಶ್‌ ವೈದ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News