×
Ad

ಆನ್ಲೈನ್ ಪೇಮೆಂಟ್ ವ್ಯವಸ್ಥೆಗೆ ಕನ್ನ: 16,180 ಕೋಟಿ ರೂ. ವಂಚನೆ; ಇಬ್ಬರ ಬಂಧನ

Update: 2023-10-13 22:19 IST

ಥಾಣೆ: ಆನ್ಲೈನ್ ಪೇಮೆಂಟ್ ಗೇಟ್ವೇ ಸೇವಾ ಪೂರೈಕೆದಾರ ವ್ಯವಸ್ಥೆಯನ್ನು ಭೇದಿಸಿ, 16,180 ಕೋಟಿ ರೂ.ದೋಚಿದಂತಹ ಬೃಹತ್ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇಬ್ಪರನ್ನು ಆ ಮಹಾರಾಷ್ಟ್ರದ ಥಾಣೆ ನಗರದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಭಾಯಂದರ್ ನಿವಾಸಿ ಅನೂಪ್ ದುಬೆ (26) ಹಾಗೂ ಮುಂಬೈ ನಿವಾಸಿ ಸಂಜಯ್ ನಾಮದೇವ್ಗಾಯಕ್ವಾಡ್ (42) ಅವರನ್ನು ಪೊಲೀಸು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ದೀರ್ಘ ಸಮಯದಿಂದಲೂ ಈ ವಂಚನೆ ನಡೆಯುತ್ತಿತ್ತಾದರೂ, ಕಂಪೆನಿಯೊಂದರ ಆನ್ಲೈನ್ ಹಣಪಾವತಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿ, 25 ಕೋಟಿ ಲಪಟಾಯಿಸಿರುವರುವ ಬಗ್ಗೆ 2023ರ ಎಪ್ರಿಲ್ ನಲ್ಲಿ ಶ್ರೀನಗರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾದ ಬಳಿಕ ಬೆಳಕಿಗೆ ಬಂದಿದೆ. ಇದೇ ರೀತಿ 16,180 ಕೋಟಿ ರೂ.ಗೂ ಅಧಿಕ ಮೊತ್ತದ ಸಂದೇಹಾಸ್ಪದ ಹಣ ವರ್ಗಾವಣೆಗಳು ನಡೆದಿರುವುದನ್ನು ಸೈಬರ್ ಅಪರಾಧ ದಳವು ಪತ್ತೆ ಹಚ್ಚಿದೆ.

ಈ ಹಗರಣಕ್ಕೆ ಸಂಬಂಧಿಸಿ ಆಕ್ಟೋಬರ್ 6ರಂದು ನಗರದ ನೌಪಾಡ ಪೊಲೀಸರು ಐವರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ ಗಳಾದ 420 (ವಂಚನೆ), 409 (ಕ್ರಿಮಿನಲ್ ಸ್ವರೂಪದ ವಿಶ್ವಾಸದ್ರೋಹ) ಹಾಗೂ 34 (ಸಮಾನ ಉದ್ದೇಶ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಗಳಡಿ ಪ್ರಕರಣ ದಾಖಲಿಸಲಾಗಿದೆ.

ಎಫ್ಐಆರ್ ಪ್ರಕಾರ ಆರೋಪಿಗಳಲ್ಲೊಬ್ಬನಾದ ಜಿತೇಂದ್ರ ಪಾಂಡೆ ಎಂಬಾತ ಬ್ಯಾಂಕ್ ಗಳಲ್ಲಿ ಗ್ರಾಹಕ ಸೇವೆ ಹಾಗೂ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದನೆನ್ನಲಾಗಿದೆ. ಈ ಬೃಹತ್ ಆನ್ಲೈನ್ ವಂಚನೆ ಜಾಲದಲ್ಲಿ ಇನ್ನೂ ಹಲವರು ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ಹಲವಾರು ಪಾಲುದಾರಿಕೆ ಸಂಸ್ಥೆಗಳನ್ನು ಆರಂಭಿಸಿ, ಈ ಕಪ್ಪುಹಣವನ್ನು ಬಿಳುಪುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News