×
Ad

ಪಹಲ್ಗಾಮ್ ವೈರಲ್ ವಿಡಿಯೊದಲ್ಲಿರುವುದು ನೌಕಾ ಅಧಿಕಾರಿ ವಿನಯ್ ನರ್ವಾಲ್ ದಂಪತಿ ಅಲ್ಲ!

Update: 2025-04-25 08:00 IST

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಯುವ ಜೋಡಿಯೊಂದು ಕಾಶ್ಮೀರದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಇರುವವರು ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಂಸಿನಿಯಾಗಿದ್ದು, ತಮ್ಮ ಮಧುಚಂದ್ರವನ್ನು ಅವರು ಸವಿಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ವಿಡಿಯೊದಲ್ಲಿ ಇರುವ ದಂಪತಿ ಸ್ವತಃ ಮುಂದೆ ಬಂದು, ವಿಡಿಯೊದಲ್ಲಿ ಇರುವವರು ತಾವು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಶ್ಮೀರ ಬೈಸರಣ್ ಕಣಿವೆಯ ಕೋಕ್ ಸ್ಟುಡಿಯೊದ ಝೋಲ್ ನಲ್ಲಿ ಯುವ ಜೋಡಿ ನರ್ತಿಸುತ್ತಿರುವ 19 ಸೆಕೆಂಡ್ ಗಳ ವಿಡಿಯೊ ಎಕ್ಸ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಈ ವಿಡಿಯೊದಲ್ಲಿ ಇರುವುದು ಆಶೀಶ್ ಸೆಹ್ರಾವತ್ ಮತ್ತು ಯಾಶಿಕಾ ಶರ್ಮಾ ಎನ್ನುವುದನ್ನು ಸ್ವತಃ ಅವರೇ ದೃಢಪಡಿಸಿದ್ದಾರೆ. ಏಪ್ರಿಲ್ 14ರಂದು ವಿಹಾರಕ್ಕೆ ತೆರಳಿದ ವೇಳೆ ಈ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊ ಹಂಚಿಕೊಂಡಿರುವ ಜೋಡಿ, ತಾವು ಸುರಕ್ಷಿತವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಈ ಬಗ್ಗೆ ತಪ್ಪುಮಾಹಿತಿ ಹರಡಿರುವುದನ್ನು ಖಂಡಿಸಿದ್ದಾರೆ. "ನಾವು ಜೀವಂತವಿದ್ದೇವೆ. ನಮ್ಮ ವಿಡಿಯೊವನ್ನು ಹೇಗೆ ಈ ರೀತಿ ಬಳಸಲಾಯಿತು ಎನ್ನುವುದು ನಮಗೆ ತಿಳಿಯದು. ಇದು ನಿಜಕ್ಕೂ ಹೃದಯವಿದ್ರಾವಕ" ಎಂದು ಯಾಶಿಕಾ ಹೇಳಿದ್ದಾರೆ. "ಲೆಫ್ಟಿನೆಂಟ್ ನರ್ವಾಲ್ ಕುಟುಂಬಕ್ಕೆ ನಾವು ತೀವ್ರ ಸಂತಾಪ ಸೂಚಿಸುತ್ತಿದ್ದೇವೆ. ನಮ್ಮ ವಿಡಿಯೊವನ್ನು ದುರ್ಬಳಕೆ ಮಾಡುವ ಯಾವುದೇ ಪ್ರಕರಣವನ್ನು ಗಮನಕ್ಕೆ ತನ್ನಿ" ಎಂದು ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News