×
Ad

ದೇಶದಲ್ಲಿ 6 ಸಾವಿರ ದಾಟಿದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ: ಹೊಸ ಸೋಂಕಿನ ಪ್ರಕರಣಗಳಲ್ಲಿ ಕೇರಳ ಮುಂಚೂಣಿ

Update: 2025-06-08 20:38 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಳೆದ 48 ಗಂಟೆಗಳಲ್ಲಿ 769 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 6,000 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ.

ಕೇರಳ ಅತಿ ಹೆಚ್ಚು ಬಾಧಿತ ರಾಜ್ಯವಾಗಿ ಮುಂದುವರಿದಿದೆ. ಅನಂತರ ಸ್ಥಾನಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ ಹಾಗೂ ದಿಲ್ಲಿ ಇದೆ ಎಂದು ಸಚಿವಾಲಯ ಹೇಳಿದೆ.

ದೇಶದಲ್ಲಿ 6,133 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಮತ್ತೆ 6 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಹೆಚ್ಚಿನ ಪ್ರಕರಣಗಳು ಲಘು ಹಾಗೂ ಮನೆ ಚಿಕಿತ್ಸೆಯ ಮೂಲಕ ನಿರ್ವಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವರ್ಷ ಜನವರಿಯಿಂದ ದೇಶದಲ್ಲಿ 65 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಮೇ 22ರ ವರೆಗೆ ದೇಶದಲ್ಲಿ ಒಟ್ಟು 257 ಕೋವಿಡ್ ರೋಗಿಗಳು ಇದ್ದರು.

ಕೋವಿಡ್ ಪರಿಸ್ಥಿತಿ ಹಾಗೂ ಸಿದ್ಧತಾ ಕ್ರಮಗಳ ಮೌಲ್ಯ ಮಾಪನ ಮಾಡಲು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕಿ ಡಾ. ಸುನಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಜೂನ್ 2 ಹಾಗೂ 3ರಂದು ಸರಣಿ ಪರಿಶೀಲನಾ ಸಭೆಗಳನ್ನು ಆಯೋಜಿಸಲಾಗಿತ್ತು.

ಸಮಗ್ರ ರೋಗಗಳ ಕಣ್ಗಾವಲು ಕಾರ್ಯಕ್ರದ ಅಡಿಯಲ್ಲಿ ಬರುವ ರಾಜ್ಯ ಹಾಗೂ ಜಿಲ್ಲಾ ಕಣ್ಗಾವಲು ಘಟಕಗಳು ಇನ್ಫ್ಲುಯಂಜಾ ರೀತಿಯ ಅನಾರೋಗ್ಯ (ಐಎಲ್ಐ) ಹಾಗೂ ಗಂಭೀರ ಉಸಿರಾಟದ ಕಾಯಿಲೆ (ಎಸ್ಎಆರ್ಐ)ಯ ಬಗ್ಗೆ ನಿಕಟ ನಿಗಾ ವಹಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News