×
Ad

ಕೇರಳ: ಸಿಪಿಎಂ ನಾಯಕನ ಹತ್ಯೆ

Update: 2024-02-23 12:01 IST

 ಪಿ.ವಿ.ಸತ್ಯನಾಥನ್ (Photo credit: onmanorama.com)

ಕೋಝಿಕ್ಕೋಡ್: ಕೊಯಿಲಾಂಡಿಯಲ್ಲಿ ನಡೆಯುತ್ತಿದ್ದ ಉತ್ಸವದ ಸಂದರ್ಭದಲ್ಲಿ ಸಿಪಿಎಂ ನಾಯಕರೊಬ್ಬರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಪೆರುವತ್ತೂರ್‌ನ ಚೆರಿಯಾಪುರಂ ದೇವಾಲಯದ ಆವರಣದಲ್ಲಿ ಕೊಯಿಲಾಂಡಿ ಸಿಪಿಎಂ ಕೇಂದ್ರೀಯ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಪಿ.ವಿ.ಸತ್ಯನಾಥನ್ (62) ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.

ಪೊಲೀಸರು ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ವರದಿಗಳ ಪ್ರಕಾರ, ಗುರುವಾರ ರಾತ್ರಿ 10 ಗಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸತ್ಯನಾಥನ್ ಮೇಲೆ ಈ ದಾಳಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News