×
Ad

"ಭಾರತದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ ಎಂದಾದರೆ ಇದೇನು?": ಆಗ್ರಾದಲ್ಲಿ ದಲಿತ ಕುಟುಂಬದ ವಿವಾಹ ಮೆರವಣಿಗೆ ಮೇಲೆ ಸವರ್ಣಿಯರ ದಾಳಿ ಬಗ್ಗೆ ವಿಶಾಲ್ ದದ್ಲಾನಿ ಪ್ರಶ್ನೆ

Update: 2025-04-19 15:50 IST

ವಿಶಾಲ್ ದದ್ಲಾನಿ (Photo credit: Ronny Sequeira/Facebook)

ಹೊಸದಿಲ್ಲಿ : ಆಗ್ರಾದಲ್ಲಿ ವಿವಾಹ ಮೆರವಣಿಗೆಯಲ್ಲಿ ದಲಿತ ವರನ ಮೇಲೆ ಸವರ್ಣೀಯರ ಗುಂಪೊಂದು ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಗಾಯಕ, ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ, ಭಾರತದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲಿಲ್ಲ ಎಂದಾದರೆ ಮತ್ತೆ ಇದೇನು? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿರುವ ವಿಶಾಲ್ ದದ್ಲಾನಿ, ಅವರು ಫುಲೆ ಚಿತ್ರದ ಬಿಡುಗಡೆಗೆ ಅನುಮತಿಸುವುದಿಲ್ಲ. ಏಕೆಂದರೆ ಅವರ ಪ್ರಕಾರ, ಭಾರತದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಹಾಗಾದರೆ, ಇದು ಏನು? ಭಾರತಕ್ಕಾಗಿ ಮಿಡಿಯುವ ಹೃದಯ ಹೊಂದಿರುವವರು ಈ ಬಗ್ಗೆ ಪ್ರಶ್ನೆಯನ್ನು ಎತ್ತಬೇಕು. ಅರಿವನ್ನು ನೀಡಬೇಕು, ಸಂಘಟಿತರಾಗಬೇಕು, ಆಂದೋಲನ ಮಾಡಬೇಕು. ಈಗ ನಿಮ್ಮ ರಾಷ್ಟ್ರಕ್ಕೆ ನಿಮ್ಮ ನಿಜವಾದ ದೇಶಭಕ್ತಿ ಮತ್ತು ನಿಜವಾದ ಧೈರ್ಯ ಬೇಕು ಎಂದು ಹೇಳಿದ್ದಾರೆ.

ಆಗ್ರಾದ ನಾಗ್ಲಾ ತಾಲ್ಫಿ ಪ್ರದೇಶದಲ್ಲಿ ದಲಿತ ಕುಟುಂಬದ ವಿವಾಹ ಮೆರವಣಿಗೆ ಮೇಲೆ ಸವರ್ಣೀಯರ ಗುಂಪೊಂದು ದಾಳಿ ನಡೆಸಿತ್ತು. ಘಟನೆಯಲ್ಲಿ ವರ ರೋಹಿತ್ ಕುಮಾರ್ ಸೇರಿದಂತೆ ಹಲವರು ಗಾಯಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News