×
Ad

ಗುಜರಾತ್ | ದೇವಸ್ಥಾನಕ್ಕೆ ತೆರಳದಂತೆ ಬೆದರಿಸಿ ದಲಿತ ವ್ಯಕ್ತಿ ಮೇಲೆ ಹಲ್ಲೆ : ಪ್ರಕರಣ ದಾಖಲು

Update: 2025-10-04 13:41 IST

ಸಾಂದರ್ಭಿಕ ಚಿತ್ರ (PTI)

ಅಹ್ಮದಾಬಾದ್ : ಗುಜರಾತ್‌ನ ಹಿಮತ್‌ನಗರದಲ್ಲಿ ದೇವಸ್ಥಾನಕ್ಕೆ ತೆರಳುವುದಾಗಿ ಹೇಳಿದ ದಲಿತ ಕಾರ್ಮಿಕನೋರ್ವನನ್ನು ಬೆದರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಖೇದವಾಡ ಲಕ್ಷ್ಮಿಪುರ ಗ್ರಾಮದ ನಿವಾಸಿ ಶೈಲೇಶ್ ಸೋಲಂಕಿ(38) ಈ ಕುರಿತು ಹಿಮತ್‌ನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಧನಪುರದ ನಿವಾಸಿ ಭರತ್ ಪಟೇಲ್ ಎಂಬಾತ ಜಾತಿ ನಿಂದನೆ ಮಾಡಿ ದೇವಸ್ಥಾನಕ್ಕೆ ತೆರಳದಂತೆ ಬೆದರಿಸಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಶೈಲೇಶ್ ಸೋಲಂಕಿ ಬಲೂಚ್ಪುರದ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಭರತ್ ಪಟೇಲ್ ಅನುಮಾನಾಸ್ಪದವಾಗಿ ಓಡಾಡುತ್ತಿರುವುದಾಗಿ ಆರೋಪಿಸಿ ಶೈಲೇಶ್ ಸೋಲಂಕಿಯನ್ನು ವಿಚಾರಿಸಿದ್ದಾನೆ. ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಶೈಲೇಶ್ ಸೋಲಂಕಿ ಹೇಳಿದಾಗ, ಭರತ್ ಪಟೇಲ್ ಆಧಾರ್ ಕಾರ್ಡ್ ತೋರಿಸುವಂತೆ ಸೂಚಿಸಿದ್ದಾನೆ. ಆಧಾರ್ ಕಾರ್ಡ್ ತೋರಿಸಿದಾಗ ಪಟೇಲ್ ಜಾತಿ ನಿಂದಿನೆಗೈದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯ ವಿರುದ್ಧ ಹಿಮತ್‌ನಗರ ಗ್ರಾಮೀಣ ಪೊಲೀಸರು ಹಲ್ಲೆ, ಬೆದರಿಕೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಸನ್‌ಗಳು ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News