×
Ad

ಮೆಸ್ಸಿಗೆ ಟಿ-20 ವಿಶ್ವಕಪ್ ಟಿಕೆಟ್, ಜೆರ್ಸಿ, ಬ್ಯಾಟ್ ಉಡುಗೊರೆ ನೀಡಿದ ಜಯ್ ಶಾ

Update: 2025-12-15 22:35 IST

credit : timesofindia

ಹೊಸದಿಲ್ಲಿ, ಡಿ.15: ಐಸಿಸಿ ಅಧ್ಯಕ್ಷ ಜಯ್ ಶಾ ಅರ್ಜೆಂಟೀನದ ಫುಟ್ಬಾಲ್ ಐಕಾನ್ ಲಿಯೊನೆಲ್ ಮೆಸ್ಸಿಗೆ ಭಾರತ ಹಾಗೂ ಅಮೆರಿಕ ನಡುವೆ ನಡೆಯಲಿರುವ 2026ರ ಆವೃತ್ತಿಯ ಪುರುಷರ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯದ ಟಿಕೆಟ್, ಟೀಮ್ ಇಂಡಿಯಾದ ಜೆರ್ಸಿ ಹಾಗೂ ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಉಪಸ್ಥಿತರಿದ್ದರು.

ಮೆಸ್ಸಿ ಅವರೊಂದಿಗೆ ಅರ್ಜೆಂಟೀನದ ಸ್ಟಾರ್‌ಗಳಾದ ರೊಡ್ರಿಗೊ ಡಿ ಪೌಲ್ ಹಾಗೂ ಲೂಯಿಸ್ ಸುಯರೆಝ್‌ಗೆ ಟೀಮ್ ಇಂಡಿಯಾದ ಜೆರ್ಸಿ ಹಾಗೂ ಫ್ರೇಮ್ ಹಾಕಿರುವ ಕ್ರಿಕೆಟ್ ಬ್ಯಾಟನ್ನು ಜಯ್ ಶಾ ನೀಡಿದರು.

ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಹ್ಯಾಮ್ ಯುನೈಟೆಡ್ ಪರ ಆಡಿರುವ ಭಾರತದ ಮಾಜಿ ಗೋಲ್‌ಕೀಪರ್ ಅದಿತಿ ಚೌಹಾಣ್ ಅವರು ಎಲ್ಲ ಮೂವರು ಫುಟ್ಬಾಲ್ ತಾರೆಯರಿಗೆ ಸಹಿ ಇರುವ ಟೀ-ಶರ್ಟ್‌ಗಳನ್ನು ಉಡುಗೊರೆಯಾಗಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News