×
Ad

ಉತ್ತರ ಪ್ರದೇಶ | ಆಸ್ಪತ್ರೆಯಲ್ಲಿ ದಿಗ್ಬಂಧನದಲ್ಲಿರಿಸಿ ವೈದ್ಯನಿಂದ ದಲಿತ ನರ್ಸ್‌ ಮೇಲೆ ಅತ್ಯಾಚಾರ; 3 ಆರೋಪಿಗಳ ಬಂಧನ

Update: 2024-08-19 17:38 IST

Photo: PTI

ಮೊರಾದಾಬಾದ್:‌ ದಲಿತ ಸಮುದಾಯಕ್ಕೆ ಸೇರಿದ ನರ್ಸ್‌ ಒಬ್ಬರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ದಿಗ್ಬಂಧನದಲ್ಲಿರಿಸಿ ವೈದ್ಯನೋರ್ವ ಅತ್ಯಾಚಾರಗೈದ ಘಟನೆ ಮೊರಾದಾಬಾದ್‌ನಿಂದ ವರದಿಯಾಗಿದೆ.

ರವಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆಯ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಸಂದೀಪ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಶನಿವಾರ ಸಂಜೆ 20 ವರ್ಷದ ಸಂತ್ರಸ್ತೆ ಸಂಜೆ 7 ಗಂಟೆಗೆ ಕರ್ತವ್ಯಕ್ಕೆ ತೆರಳಿದ್ದರೆಂದು ಹೇಳಲಾಗಿದೆ. ಕಳೆದ ಏಳು ತಿಂಗಳಿಂದ ಆಕೆ ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಡ ರಾತ್ರಿ ಇನ್ನೋರ್ವ ನರ್ಸ್‌ ಮೆಹನಾಝ್‌ ಆಕೆಗೆ ಡಾ. ಶಹನವಾಝ್‌ ಎಂಬವರನ್ನು ಅವರ ಕೊಠಡಿಯಲ್ಲಿ ಭೇಟಿಯಾಗುವಂತೆ ಸೂಚಿಸಿದರು. ಸಂತ್ರಸ್ತೆ ವಿರೋಧಿಸಿದಾಗ ಮೆಹನಾಝ್‌, ಮತ್ತೋರ್ವ ವಾರ್ಡ್‌ ಬಾಯ್‌ ಜುನೈದ್‌ ಆಕೆಯನ್ನು ಆಸ್ಪತ್ರೆಯ ಮೇಲಂತಸ್ತಿನ ಕೊಠಡಿಯೊಂದರಲ್ಲಿ ದಿಗ್ಬಂಧನದಲ್ಲಿರಿಸಿ ಹೊರಗಡೆಯಿಂದ ಲಾಕ್‌ ಮಾಡಿದ್ದರು. ನಂತರ ಅಲ್ಲಿಗೆ ಆಗಮಿಸಿದ ವೈದ್ಯ ಶಹನವಾಝ್‌ ಆಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಗೆ ಕೊಲೆ ಬೆದರಿಕೆಯೊಡ್ಡಿ ಆಕೆಯ ಜಾತಿ ನಿಂದನೆಗೈದಿದ್ದರೆಂದು ಆರೋಪಿಸಲಾಗಿದೆ.

ಮೂವರು ಆರೋಪಿಗಳನ್ನು ಬಂಧಿಸಿದ ನಂತರ ಆರೋಗ್ಯ ಇಲಾಖೆ ಆಸ್ಪತ್ರೆಯನ್ನು ಸೀಲ್‌ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News