×
Ad

ದಿಲ್ಲಿ ವಿಧಾನ ಸಭೆ ಚುನಾವಣೆ | ಸಂಜೆ 5 ಗಂಟೆವರೆಗೆ ಶೇ. 58 ಮತದಾನ

Update: 2025-02-05 22:09 IST

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ದಿಲ್ಲಿ ವಿಧಾನ ಸಭೆ ಚುನಾವಣೆಗೆ ಮತದಾನ ಸಂಜೆ 6 ಗಂಟೆ ವರೆಗೆ ನಡೆದಿದ್ದು, ಸಂಜೆ 5 ಗಂಟೆ ವರೆಗೆ ಶೇ. 58 ಮತದಾನ ದಾಖಲಾಗಿದೆ.

ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆ ವರೆಗೆ ಮುಂದುವರಿಯಿತು.

ಎಲ್ಲಾ 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, 2696 ಮತದಾನದ ಸ್ಥಳಗಳಲ್ಲಿ 16,766 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಸಂಜೆ 5 ಗಂಟೆ ವರೆಗೆ 57.70 ಮತ ಚಲಾವಣೆಯಾಗಿದೆ. ಮುಸ್ತಫಾಬಾದ್‌ನಲ್ಲಿ ಅತ್ಯಧಿಕ ಶೇ. 66.68 ಹಾಗೂ ಕರೋಲ್ ಬಾಗ್ ಯಲ್ಲಿ ಅತ್ಯಂತ ಕಡಿಮೆ ಶೇ. 47.5 ಮತ ಚಲಾವಣೆಯಾಗಿದೆ ಎಂದು ದಿಲ್ಲಿ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News