×
Ad

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ದಿಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಪ್ರಕರಣ ದಾಖಲು

Update: 2025-02-04 16:24 IST

 ದಿಲ್ಲಿ ಮುಖ್ಯಮಂತ್ರಿ ಅತಿಶಿ | PTI 

ಹೊಸ ದಿಲ್ಲಿ: ಮಂಗಳವಾರ ದಿಲ್ಲಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ದಿಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧದ ಪ್ರಕರಣ ಮೊದಲನೆಯದಾದರೆ, ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರ ಬೆಂಬಲಿಗರ ವಿರುದ್ಧ ಎರಡನೆ ಪ್ರಕರಣ ದಾಖಲಾಗಿದೆ.

ಮಂಗಳವಾರ ಮುಂಜಾನೆ ಸುಮಾರು 1 ಗಂಟೆಯ ವೇಳೆಗೆ ಗೋವಿಂದ್ ಪುರಿ ಪೊಲೀಸ್ ಠಾಣೆಯ ಮುಖ್ಯ ಪೇದೆಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರ ಮೇಲೆ ಹಲ್ಲೆ ನಡೆಸಿದ ಅರೋಪದ ಮೇಲೆ ಆಡಳಿತಾರೂಢ ಆಪ್ ಪಕ್ಷದ ಸದಸ್ಯರಾದ ಅಶ್ಮಿತ್ ಹಾಗೂ ಸಾಗರ್ ಮೆಹ್ತಾ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ನಡುರಾತ್ರಿ ಬಾಬಾ ಫತೇಹ್ ಸಿಂಗ್ ಮಾರ್ಗ್ ನಲ್ಲಿ ಬೃಹತ್ ಜನಜಂಗುಳಿ ಸೇರಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಮುಖ್ಯ ಪೇದೆ ಕೌಶಲ್ ಪಾಲ್ ರನ್ನು ಸ್ಥಳಕ್ಕೆ ಕಳಿಸಲಾಗಿತ್ತು. ಅವರು ಜನಜಂಗುಳಿಯ ವಿಡಿಯೊವನ್ನು ಚಿತ್ರೀಕರಿಸುತ್ತಿರುವಾಗ, ಅವರ ಮೇಲೆ ಆಪ್ ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ, ನನ್ನ ಪ್ರತಿಸ್ಪರ್ಧಿಯಾದ ಬಿಜೆಪಿಯ ರಮೇಶ್ ಬಿಧೂರಿ ಬಹಿರಂಗವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ಕಾರಣಕ್ಕೆ ನನ್ನನ್ನು ಶಿಕ್ಷಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರ ವಿರುದ್ಧ ಕಲ್ಕಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮುಖ್ಯಮಂತ್ರಿ ಅತಿಶಿ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ಹತ್ತು ವಾಹನಗಳು ಹಾಗೂ ಸುಮಾರು 60 ಮಂದಿ ಬೆಂಬಲಿಗರೊಂದಿಗೆ ಫತೇಹ್ ಸಿಂಗ್ ಮಾರ್ಗ್ ಗೆ ಆಗಮಿಸುವ ಮೂಲಕ ಅತಿಶಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News