ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ಸಚಿವ ಆನಂದ್ ರಾಜೀನಾಮೆ
Update: 2024-04-10 19:16 IST
ಹೊಸದಿಲ್ಲಿ : ಅರವಿಂದ್ ಕೇಜಿವಾಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ರಾಜ್ ಕುಮಾರ್ ಆನಂದ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ರಾಜ್‌ಕುಮಾರ್ ಅವರು ಪಟೇಲ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸಚಿವ ಸ್ಥಾನದ ಜೊತೆಗೆ ಆಮ್ ಆದ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಾರ್ಚ್ 21 ರಂದು ಅರವಿಂದ್ ಕೇಜಿವಾಲ್ ಬಂಧಿಸಿದ ನಂತರ ಅವರ ಸಂಪುಟದಿಂದ ಇದು ಮೊದಲ
ರಾಜೀನಾಮೆಯಾಗಿದೆ.