ಮಾಲಿನ್ಯದಿಂದ ಜೀವತಾವಧಿಯ 11.9 ವರ್ಷ ಕಳೆದುಕೊಳ್ಳಲಿರುವ ದಿಲ್ಲಿ ಜನರು; ಅಧ್ಯಯನ ವರದಿ
Photo: PTI
ಹೊಸದಿಲ್ಲಿ: ದಿಲ್ಲಿ ಜಗತ್ತಿನ ಅತ್ಯಂತ ಮಾಲಿನ್ಯ ನಗರವಾಗಿ ಹೊರಹೊಮ್ಮಿದ್ದು, ಪ್ರಸಕ್ತ ಮಾಲಿನ್ಯ ಮಟ್ಟವು ಇದೇ ರೀತಿ ಮುಂದುವರಿದರೆ ಅಲ್ಲಿನ ನಿವಾಸಿಗಳ ತಮ್ಮ ಜೀವಿತಾವಧಿಯಲ್ಲಿ 11.9 ವರ್ಷಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಚಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ (ಎಕ್ಯುಎಲ್ಐ) 1.3 ಶತಕೋಟಿ ಜನರು ವಾರ್ಷಿಕ ಸರಾಸರಿ ಕಣಗಳ ಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ (5g/ m3) ಮಿತಿಯನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಕೂಡ ಹೇಳಿದೆ. ದೇಶದ ಜನಸಂಖ್ಯೆ (ಶೇ. 67.4) ಜನರು ದೇಶದ ಸ್ವಂತ ರಾಷ್ಟ್ರೀಯ ಗುಣಮಟ್ಟ (40g/ m3) ಯನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ (5g/ m3) ಮಾಲಿನ್ಯ ಮಿತಿಯನ್ನು ತಲುಪಿದರೆ ಏನಾಗಬಹುದು ಎಂಬುದಕ್ಕೆ ಹೋಲಿಸಿದರೆ, ಸೂಕ್ಷ್ಮವಾದ ಕಣಗಳ ಮಾಲಿನ್ಯವು ಜನರ ಸರಾಸರಿ ಜೀವಿತಾವಧಿಯನ್ನು (5.3) ವರ್ಷಗಳಷ್ಟು ಕಡಿಮೆ ಮಾಡಲಿದೆ ಎಂದು ಅಧ್ಯಯನ ತಿಳಿಸಿದೆ.
ಜಗತ್ತಿನಲ್ಲೇ ದಿಲ್ಲಿ ಅತ್ಯಂತ ಮಾಲಿನ್ಯದ ನಗರವಾಗಿದ್ದು, ಅದರ 18 ದಶಲಕ್ಷ ನಿವಾಸಿಗಳು ತಮ್ಮ ಸರಾಸರಿ 11.9 ಜೀವಿತಾವಧಿಯನ್ನು ಕಳೆದುಕೊಳ್ಳಲಿದ್ದಾರೆ. ಪ್ರಸಕ್ತ ಮಾಲಿನ್ಯ ಮಟ್ಟವು ಮುಂದುವರಿದರೆ ಹಾಗೂ ರಾಷ್ಟ್ರೀಯ ಮಾರ್ಗಸೂಚಿಗೆ ಹೋಲಿಸಿದರೆ, ತಮ್ಮ ಜೀವಿತಾವಧಿಯ 8.5 ವರ್ಷಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಕ್ಯುಎಲ್ಐ ಹೇಳಿದೆ. ಈ ವಲಯದ ಕನಿಷ್ಠ ಮಾಲಿನ್ಯದ ಜಿಲ್ಲೆಗಳೆಂದರೆ ಪಂಜಾಬ್ನ ಪಠಾಣ್ಕೋಟ್. ಇಲ್ಲಿ ಸೂಕ್ಷ್ಮವಾದ ಕಣಗಳ ಮಾಲಿನ್ಯವು ವಿಶ್ವ ಆರೋಗ್ಯ ಸಂಸ್ಥೆಯ ಮಿತಿಗಿಂತ 7 ಪಟ್ಟು ಹೆಚ್ಚಿದೆ. ಪ್ರಸಕ್ತ ಸ್ಥಿತಿ ಮುಂದುವರಿದರೆ, ಜನರು ತಮ್ಮ ಜೀವಿತಾವಧಿಯ 3.1 ವರ್ಷ ವನ್ನು ಕಳೆದುಕೊಳ್ಳಲಿದ್ದಾರೆ ಎಂದು ಅದು ಹೇಳಿದೆ.