×
Ad

ಗಸ್ತಿನಲ್ಲಿದ್ದ ಪೇದೆಗೆ ಢಿಕ್ಕಿ ಹೊಡೆದು 10 ಮೀ. ಎಳೆದೊಯ್ದ ಕಾರು ಚಾಲಕ

Update: 2024-09-29 15:00 IST

ಸಂದೀಪ್ (Photo: PTI)

ಹೊಸದಿಲ್ಲಿ: ನಂಗ್ಲೋಯ್ ಪ್ರದೇಶದಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯ ಬೈಕ್ ಗೆ ಢಿಕ್ಕಿ ಹೊಡೆದು 10 ಮೀಟರ್ ವರೆಗೆ ಕಾರೊಂದು ಎಳೆದೊಯ್ದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಪೊಲೀಸ್ ಪೇದೆ ಮೃತಪಟ್ಟಿದ್ದಾರೆ.

ಸಂದೀಪ್(30) ಮೃತ ಪೊಲೀಸ್ ಪೇದೆ. ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಂಗ್ಲೋಯ್ ಪ್ರದೇಶದಲ್ಲಿ ಪೊಲೀಸರನ್ನು ಗಸ್ತು ತಿರುಗಲು ನೇಮಿಸಲಾಗಿತ್ತು. ಸಂದೀಪ್ ತನ್ನ ದ್ವಿಚಕ್ರ ವಾಹನದಲ್ಲಿ ಗಸ್ತು ತಿರುಗುತ್ತಿದ್ದಾಗ ವೇಗವಾಗ ಕಾರೊಂದು ಬಂದಿದೆ. ಇದನ್ನು ಗಮನಿಸಿ ಚಾಲಕನಿಗೆ ಕಾರು ನಿಧಾನವಾಗಿ ಚಲಾಯಿಸುವಂತೆ ಸಂದೀಪ್ ಸೂಚಿಸಿದ್ದಾರೆ.

ಆದರೆ ಚಾಲಕ ಬೈಕ್ ಗೆ ಢಿಕ್ಕಿ ಹೊಡೆದು ಪೇದೆಯನ್ನು 10 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೇದೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಘಟನೆಯ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಕೃತ್ಯದ ಬಳಿಕ ಅವರು ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News