ಪ್ರಧಾನಿ ವಿರುದ್ಧ ಬೆದರಿಕೆ ಹೇಳಿಕೆ : ತಮಿಳುನಾಡು ಸಚಿವರ ವಿರುದ್ಧ ದಿಲ್ಲಿಯಲ್ಲಿ ಎಫ್ಐಆರ್ ದಾಖಲು
Update: 2024-03-14 23:03 IST
TM Anbarasan | Photo : Facebook
ಹೊಸದಿಲ್ಲಿ : ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬೆದರಿಕೆ ಹೇಳಿಕೆಗಳನ್ನು ನೀಡಿದ್ದ ಆರೋಪದಲ್ಲಿ ತಮಿಳುನಾಡು ಸಚಿವ ಟಿ.ಎಂ.ಅನ್ಬರಸನ್ ವಿರುದ್ಧ ದಿಲ್ಲಿ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ವಕೀಲ ಸತ್ಯರಂಜನ ಸ್ವೈಯ್ನ್ ಸಲ್ಲಿಸಿರುವ ದೂರಿನ ಮೇರೆಗೆ ಬುಧವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೋಲಿಸ್ ಠಾಣೆಯಲ್ಲಿ ಅನ್ಬರಸನ್ ವಿರುದ್ಧ ಪ್ರಕರಣ ದಾಖಲಾಗಿದೆ.
‘ಮೋದಿಯವರನ್ನು ತುಂಡುತುಂಡಾಗಿ ಕತ್ತರಿಸುವಂತೆ ’ಅನ್ಬರಸನ್ ಬಹಿರಂಗ ಕರೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.