×
Ad

ನೌಕಾಪಡೆಯ ಉಪಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

Update: 2023-12-05 22:33 IST

Photo: X/@indiannavy

ಹೊಸದಿಲ್ಲಿ: ಭಾರತೀಯ ನೌಕಾಪಡೆಯ ನೂತನ ಉಪ ಮುಖ್ಯಸ್ಥರಾಗಿ ವೈಸ್ ಆಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರನ್ನು ಭಾರತ ಸರಕಾರ ಮಂಗಳವಾರ ನೇಮಕಗೊಳಿಸಿದೆ. ಪ್ರಸಕ್ತ ತ್ರಿಪಾಠಿ ಅವರು ಮುಂಬೈಯಲ್ಲಿ ಮುಖ್ಯ ಕಾರ್ಯಾಲಯವಿರುವ ನೌಕಾಪಡೆಯ ಪಶ್ಚಿಮ ಕಮಾಂಡ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕಾಪಡೆಯ ಹಾಲಿ ಉಪವರಿಷ್ಠ ವೈಸ್ ಆಡ್ಮಿರಲ್ ಎಸ್.ಜೆ.ಸಿಂಗ್ ಅವರನ್ನು ಪಶ್ಚಿಮವಲಯದ ನೌಕಾಪಡೆಯ ಕಮಾಂಡರ್ ಆಗಿ ನೇಮಕಗೊಳಿಸಲಾಗಿದೆ.

ವೈಸ್ ಆಡ್ಮಿರಲ್ ತ್ರಿಪಾಠಿ ಅವರು ರಕ್ಷಣಾ ಸಚಿವಾಲಯದ ಮುಖ್ಯ ಕಾರ್ಯಾಲಯದಲ್ಲಿರುವ ಸಿಬ್ಬಂದಿ ವರಿಷ್ಠ ಸೇರಿದಂತೆ ವಿವಿಧ ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಮಧ್ಯಪ್ರದೇಶದ ರೇವಾದಲ್ಲಿರುವ ಸೈನಿಕ ಶಾಲೆ ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡಮಿ ಯ (ಎನ್ಡಿಎ)ಹಳೆ ವಿದ್ಯಾರ್ಥಿಯಾದ ದಿನೇಶ್ ಕೆ. ತ್ರಿಪಾಠಿ ಅವರು 1985ರ ಜುಲೈನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ಅವರು ಯುದ್ಧನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿ ಹಾಗೂ ಇಲೆಕ್ಟ್ರಾನಿಕ್ ಸಮರಕಲೆ ಅಧಿಕಾರಿ ಸೇರಿದಂತೆ ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News