×
Ad

ಕೆನಡದೊಂದಿಗಿನ ವಿವಾದ: ಸರಕಾರಕ್ಕೆ ಕಾಂಗ್ರೆಸ್ ಬೆಂಬಲ

Update: 2023-09-19 22:22 IST

ಜಸ್ಟಿನ್ ಟ್ರೂಡೊ, ಜೈರಾಮ್ ರಮೇಶ್| Photo: PTI 

ಹೊಸದಿಲ್ಲಿ: ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಯಲ್ಲಿ ‘ಭಾರತೀಯ ಏಜಂಟ’ರ ಪಾತ್ರವಿದೆ ಎಂಬ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಹೇಳಿಕೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಮಂಗಳವಾರ ಸರಕಾರಕ್ಕೆ ಬೆಂಬಲ ನೀಡಿದೆ.

ದೇಶದ ಹಿತಾಸಕ್ತಿಗಳು ಮತ್ತು ಕಳವಳಗಳಿಗೆ ನಾವು ಯಾವತ್ತೂ ಪ್ರಮುಖ ಆದ್ಯತೆ ನೀಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧದ ದೇಶದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂಬುದಾಗಿ ಭಾರತೀಯ ನ್ಯಾಶನಲ್ ಕಾಂಗ್ರೆಸ್ ಯಾವತ್ತೂ ಭಾವಿಸಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News