×
Ad

ಡಿಎಂಕೆ ಎಂದರೆ ಡೆಂಗ್ಯೂ, ಮಲೇರಿಯಾ, ಸೊಳ್ಳೆ: ಉದಯನಿಧಿ ಹೇಳಿಕೆಗೆ ಅಣ್ಣಾಮಲೈ ತಿರುಗೇಟು

Update: 2023-09-07 21:45 IST

ಕೆ ಅಣ್ಣಾಮಲೈ , ಸ್ಟಾಲಿನ್ | Photo: PTI 

ಚೆನ್ನೈ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ನಿರ್ಮೂಲನೆ ಆಗಬೇಕಿದೆ, ಸನಾತನ ಧರ್ಮ ಅನ್ನುವುದು ಮಲೇರಿಯಾ, ಡೆಂಗ್ಯೂ ಇದ್ದ ಹಾಗೆ ಎಂದು ನೀಡಿರುವ ಹೇಳಿಕೆಗೆ ಮಾಜಿ ಐಪಿಎಸ್, ತ.ನಾ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಡಿ ಎಂದರೆ ಡೆಂಗ್ಯೂ, ಎಂ ಎಂದರೆ ಮಲೇರಿಯಾ, ಕೆ ಅಂದರೆ ಕೊಸು (ಸೊಳ್ಳೆ) ಎಂದು ಟ್ವೀಟ್ ಮಾಡಿದ್ದಾರೆ.

"ತಮಿಳುನಾಡಿನಿಂದ ಏನಾದರೂ ನಿರ್ಮೂಲನೆ ಬೇಕಾದರೆ, ಅದು ಡಿಎಂಕೆ. ಮುಂದೆ, ಜನರು ಈ ಮಾರಣಾಂತಿಕ ಕಾಯಿಲೆಗಳನ್ನು ಡಿಎಂಕೆಯೊಂದಿಗೆ ಸಂಯೋಜಿಸುತ್ತಾರೆ ಎಂಬುದು ನಮಗೆ ಖಚಿತವಾಗಿದೆ" ಎಂದು ಅಣ್ಣಾಮಲೈ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News