ಇರಾನ್‍ಗೆ ಪ್ರಯಾಣಿಸಬೇಡಿ: ಅಮೆರಿಕ ಪ್ರಜೆಗಳಿಗೆ ಸಲಹೆ
Update: 2025-07-11 23:18 IST
PC | X ; @OANN
ವಾಷಿಂಗ್ಟನ್: ಇರಾನಿನ ಆಡಳಿತವು ಒಡ್ಡಿದ `ತೀವ್ರ ಅಪಾಯಗಳನ್ನು' ಉಲ್ಲೇಖಿಸಿ, ಇರಾನಿಗೆ ಎಲ್ಲಾ ಪ್ರಯಾಣಗಳನ್ನು ತಪ್ಪಿಸಲು ಅಮೆರಿಕದ ನಾಗರಿಕರನ್ನು, ವಿಶೇಷವಾಗಿ ಇರಾನಿಯನ್-ಅಮೆರಿಕನ್ನರನ್ನು ಆಗ್ರಹಿಸಿ ಅಮೆರಿಕದ ವಿದೇಶಾಂಗ ಇಲಾಖೆ ಹೊಸ ಸಲಹೆಯನ್ನು ಜಾರಿಗೊಳಿಸಿದೆ.
ಇರಾನ್ ಉಭಯ ರಾಷ್ಟ್ರೀಯತೆಯನ್ನು ಮಾನ್ಯ ಮಾಡುವುದಿಲ್ಲ ಮತ್ತು ಬಂಧಿತ ಅಮೆರಿಕನ್ ನಾಗರಿಕರಿಗೆ ಕಾನ್ಸುಲರ್ ಸೇವೆಯನ್ನು ನಿರಾಕರಿಸುತ್ತಿದೆ. ಬಾಂಬ್ ದಾಳಿ ನಿಂತಿದ್ದರೂ, ಇರಾನಿಗೆ ಪ್ರಯಾಣಿಸುವುದು ಸುರಕ್ಷಿತ ಎಂದು ಅರ್ಥೈಸುವಂತಿಲ್ಲ. ಖಂಡಿತಾ ಸುರಕ್ಷಿತವಲ್ಲ ಎಂದು ವಿದೇಶಾಂಗ ಇಲಾಖೆ ಒತ್ತಿಹೇಳಿದ್ದು, ಇರಾನ್‍ಗೆ ಪ್ರಯಾಣಿಸುವುದರಿಂದ ಆಗಬಹುದಾಗ ಅಪಾಯಗಳ ಮಾಹಿತಿ ನೀಡುವ ಹೊಸ ವೆಬ್‍ಸೈಟ್ ಒಂದನ್ನು ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.