×
Ad

ಸಾಕ್ಷ್ಯಚಿತ್ರ ಹಕ್ಕುಸ್ವಾಮ್ಯ ವಿವಾದ | ನಯನತಾರಾಗೆ ಭಾರಿ ಹಿನ್ನಡೆ: ಧನುಶ್ ಪರ ತೀರ್ಪು ನೀಡಿದ ನ್ಯಾಯಾಲಯ

Update: 2025-01-28 19:43 IST

ಧನುಷ್ , ನಯನತಾರಾ | PC : PTI

ಚೆನ್ನೈ: ನಟಿ ನಯನತಾರಾ ವಿರುದ್ಧ ನಟ ಧನುಶ್ ದಾಖಲಿಸಿದ್ದ ಮೊಕದ್ದಮೆಯನ್ನು ವಜಾಗೊಳಿಸಬೇಕು ಎಂದು ನೆಟ್ ಫ್ಲಿಕ್ಸ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ.

ನಯನತಾರಾರ ಸಾಕ್ಷ್ಯಚಿತ್ರವೊಂದರಲ್ಲಿ ಧನುಶ್ ನಿರ್ಮಿಸಿದ್ದ ಮೂರು ಸೆಕೆಂಡ್ ನ ಚಿತ್ರದ ತುಣುಕೊಂದನ್ನು ಅವರ ಸಮ್ಮತಿ ಇಲ್ಲದೆ ಬಳಸಿಕೊಳ್ಳಲಾಗಿತ್ತು.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಟಿ ನಯನತಾರಾ, ಆಕೆಯ ಪತಿ ವಿಗ್ನೇಶ್ ಶಿವನ್ ಹಾಗೂ ಅವರ ನಿರ್ಮಾಣ ಸಂಸ್ಥೆ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಿವಿಲ್ ದಾವೆಯನ್ನು ದಾಖಲಿಸಿದ್ದರು. ನೆಟ್ ಫ್ಲಿಕ್ಸ್ ಒರಿಜಿನಲ್ ನಲ್ಲಿ ಪ್ರದರ್ಶನಗೊಂಡಿದ್ದ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಸಾಕ್ಷ್ಯಚಿತ್ರದಲ್ಲಿ ನನ್ನ ಚಿತ್ರ ‘ನಾನುಂ ರೌಡಿ ದಾನ್’ ಚಿತ್ರದ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆ ದಾವೆಯಲ್ಲಿ ಧನುಶ್ ಆರೋಪಿಸಿದ್ದರು.

ಭಾರತದಲ್ಲಿ ನೆಟ್ ಫ್ಲಿಕ್ಸ್ ವಿಷಯ ಹೂಡಿಕೆಯನ್ನು ನಿರ್ವಹಿಸುವ ಮುಂಬೈ ಮೂಲದ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವೀಸಸ್ ಇಂಡಿಯಾ ಎಲ್ಎಲ್ಪಿಯ ವಿರುದ್ಧ ದಾವೆ ದಾಖಲಿಸಲು ಧನುಶ್ ರ ನಿರ್ಮಾಣ ಸಂಸ್ಥೆ ವಾಂಡರ್ ಬರ್ ಫಿಲ್ಮ್ಸ್ ಪ್ರೈವೇಟ್ ಕೂಡಾ ಹೈಕೋರ್ಟ್ ನಿಂದ ಅನುಮತಿ ಕೋರಿತ್ತು.

ನಯನತಾರಾ ಸಾಕ್ಷ್ಯಚಿತ್ರದಿಂದ ಇನ್ನು 24 ಗಂಟೆಯೊಳಗೆ ವ್ಯಾಜ್ಯಕ್ಕೀಡಾಗಿರುವ ತುಣುಕನ್ನು ತೆಗೆದು ಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಧನುಶ್ ಎಚ್ಚರಿಕೆ ನೀಡಿದ ನಂತರ ಈ ಕಾನೂನು ಕ್ರಮ ಜಾರಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News