×
Ad

ದಿಲ್ಲಿ | ಮಾದಕ ವ್ಯಸನಿ ದಂಪತಿಯಿಂದ 1.8 ಲಕ್ಷ ರೂ.ಗೆ 6 ತಿಂಗಳ ಮಗುವಿನ ಮಾರಾಟ!

Update: 2025-10-25 20:57 IST

ಸಾಂದರ್ಭಿಕ ಚಿತ್ರ | Photo Credit : freepik.com

ಹೊಸದಿಲ್ಲಿ,ಅ.25: ಮಾದಕದ್ರವ್ಯ ವ್ಯಸನಿಗಳಾದ ದಂಪತಿ, ತಮ್ಮ ಆರು ತಿಂಗಳ ಮಗುವನ್ನು ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ ಘಟನೆ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ವರದಿಯಾಗಿದೆ.

ಮಾದಕದ್ರವ್ಯ ವ್ಯಸನದಿಂದಾಗಿ ತಮ್ಮ ಗಂಡು ಮಗುವನ್ನು ಪೋಷಿಸಲು ಸಾಧ್ಯವಾಗದೆ ಈ ದಂಪತಿ ನಾಲ್ಕು ಹೆಣ್ಣು ಮಕ್ಕಳ ತಂದೆಯಾದ ಬುದ್ಲಾಡ ಪಟ್ಟಣದ ಗುಜರಿ ವ್ಯಾಪಾರಿಗೆ 1.8 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಎರಡೂ ಕುಟುಂಬಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದೀಗ ಹಸುಳೆಯನ್ನು ಶಿಶುಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.

ಮಗುವಿನ ಮಾರಾಟದಿಂದ ಬಂದ ಹಣವನ್ನು ದಂಪತಿಯು ಮಾದಕದ್ರವ್ಯ ಖರೀದಿಗೆ ಖರ್ಚು ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಚಿಕ್ಕಮ್ಮ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಶುವನ್ನು ಮಾರಾಟ ಮಾಡಿದ ಹಾಗೂ ಖರೀದಿಸಿದ ಕುಟುಂಬಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News