105 ಕೋಟಿ ರೂಪಾಯಿ ವಂಚನೆ ಪ್ರಕರಣ | ಅಸ್ಸಾಮಿನ ಮಾಜಿ ಐಎಎಸ್ ಅಧಿಕಾರಿ ನಿವಾಸಕ್ಕೆ ಈಡಿ ದಾಳಿ
Update: 2025-08-05 20:58 IST
PC : Enforcement Directorate
ಗುವಾಹಟಿ,ಆ.5: ಜಾರಿ ನಿರ್ದೇಶನಾಲಯ(ಈಡಿ)ವು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎಸ್ಸಿಇಆರ್ಟಿ)ಯಲ್ಲಿ ನಡೆದಿದೆ ಎನ್ನಲಾದ 105 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸೆವಾಲಿ ದೇವಿ ಶರ್ಮಾ ಮತ್ತು ಇತರರ ಮನೆಗಳ ಮೇಲೆ ಮಂಗಳವಾರ ದಾಳಿಗಳನ್ನು ನಡೆಸಿದೆ.
ಎಸ್ಸಿಇಆರ್ಟಿಯ ಮುಕ್ತ ಮತ್ತು ದೂರ ಶಿಕ್ಷಣ ಘಟಕದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ನಿರ್ದೇಶಕರಾಗಿದ್ದ ಶರ್ಮಾ ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ಎರಡು ವರ್ಷಗಳ ಡಿಪ್ಲೋಮಾ ಕಾರ್ಯಕ್ರಮವನ್ನು ಜಾರಿಗೊಳಿಸುವಾಗ ಬೃಹತ್ ಪ್ರಮಾಣದಲ್ಲಿ ಹಣಕಾಸು ಅವ್ಯವಹಾರಗಳನ್ನು ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಶರ್ಮಾ ಅವರು ಆದಾಯಕ್ಕಿಂತ 5.7 ಕೋಟಿ ರೂಪಾಯಿ ಗೂ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಪ್ರಾಥಮಿಕ ಪೋಲಿಸ್ ವಿಚಾರಣೆಯು ಸೂಚಿಸಿತ್ತು.