ತಮಿಳುನಾಡು ಸಚಿವ ಪೆರಿಯಸ್ವಾಮಿ, ಅವರ ಪುತ್ರ ಶಾಸಕ ಸೆಂಥಿಲ್ ಕುಮಾರ್‌ಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಈಡಿ ದಾಳಿ
ತಮಿಳುನಾಡು ಸಚಿವ ಐ.ಪೆರಿಯಸ್ವಾಮಿ (Photo: NDTV)
ದಿಂಡಿಗಲ್: ತಮಿಳುನಾಡು ಸಚಿವ ಐ.ಪೆರಿಯಸ್ವಾಮಿ ಹಾಗೂ ಅವರ ಪುತ್ರ ಹಾಗೂ ಡಿಎಂಕೆ ಶಾಸಕ ಐ.ಪಿ.ಸೆಂಥಿಲ್ ಕುಮಾರ್ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಶನಿವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ಮಧುರೈ ನಗರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿಂಡಿಗಲ್‌ನ ದುರೈರಾಜ್ ನಗರ್‌ನಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಐ.ಪೆರಿಯಾಸ್ವಾಮಿ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ಇದಲ್ಲದೆ, ಮತ್ತೆರಡು ತಂಡಗಳು ಸೀಲಪಾಡಿಯಲ್ಲಿರುವ ಸಚಿವ ಐ.ಪೆರಿಯಸ್ವಾಮಿ ಅವರ ಶಾಸಕ ಪುತ್ರ ಐ.ಪಿ.ಸೆಂಥಿಲ್ ಕುಮಾರ್ ಹಾಗೂ ದಿಂಡಿಗಲ್‌ನ ವಲ್ಲಲಾರ್‌ನಲ್ಲಿರುವ ಅವರ ಪುತ್ರಿ ಇಂದ್ರಾನಿಯ ನಿವಾಸದ ಮೇಲೂ ದಾಳಿ ನಡೆಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಎಪ್ರಿಲ್ 29, 2025ರಂದು ಗ್ರಾಮೀಣಾಭಿವೃದ್ಧಿ ಸಚಿವ ಐ.ಪೆರಿಯಸ್ವಾಮಿ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಮದ್ರಾಸ್ ಹೈಕೋರ್ಟ್ ಮರುಜೀವ ನೀಡಿತ್ತು.