×
Ad

ಇರಾನ್-ಇಸ್ರೇಲ್ ನಡುವೆ ಉಲ್ಬಣಗೊಂಡ ಸಂಘರ್ಷ: ಆ. 8ರವರೆಗೆ ಟೆಲ್ ಅವೀವ್ ಗೆ ವಿಮಾನ ಸೇವೆ ಅಮಾನತುಗೊಳಿಸಿದ ಏರ್ ಇಂಡಿಯಾ

Update: 2024-08-02 15:24 IST

ಏರ್ ಇಂಡಿಯಾ | PC : PTI 

ಹೊಸದಿಲ್ಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡಿರುವುದರಿಂದ ಆಗಸ್ಟ್ 8ರವರೆಗೆ ಟೆಲ್ ಅವೀವ್ ಗೆ ನಿರ್ಗಮನ ಹಾಗೂ ಆಗಮನ ವಿಮಾನಗಳ ಸೇವೆಯನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

“ಈ ಅವಧಿಯಲ್ಲಿ ನಾವು ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುತ್ತಿದ್ದೇವೆ ಹಾಗೂ ಟೆಲ್ ಅವೀವ್ ನಿಂದ ಆಗಮಿಸುವ ಹಾಗೂ ಟೆಲ್ ಅವೀವ್ ಗೆ ನಿರ್ಗಮಿಸುವ ಪ್ರಯಾಣಿಕರಿಗೆ ಒಂದು ಬಾರಿಯ ಮರು ಪ್ರಯಾಣ ಹಾಗೂ ಟಿಕೆಟ್ ರದ್ದತಿ ಪಾವತಿಯನ್ನು ರದ್ದುಗೊಳಿಸುತ್ತೇವೆ” ಎಂದು ತಿಳಿಸಲಾಗಿದೆ.

“ಪ್ರಯಾಣಿಕರು ಹಾಗೂ ವಿಮಾನಯಾನ ಸಿಬ್ಬಂದಿಗಳ ಸುರಕ್ಷತೆ ನಮ್ಮ ಪ್ರಪ್ರಥಮ ಆದ್ಯತೆಯಾಗಿದೆ. ಮಾಹಿತಿಗಾಗಿ ನಮ್ಮ 24/7 ಸಂಪರ್ಕ ಕೇಂದ್ರವನ್ನು 011-69329333/011-69329999 ಸಂಖ್ಯೆಯಲ್ಲಿ ಸಂಪರ್ಕಿಸಿ” ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News