×
Ad

ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಛಾಟಿಸಲು ನೈತಿಕ ಸಮಿತಿ ಅನುಮೋದನೆ

Update: 2023-11-09 17:23 IST

Photo : PTI

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆಗೆ ನಗದು ಹಣದ ಆರೋಪಗಳನ್ನು ಪರಿಶೀಲಿಸುತ್ತಿರುವ ಸಂಸದೀಯ ನೈತಿಕ ಸಮಿತಿಯು ಅವರನ್ನು ಸಂಸತ್‌ನಿಂದ ಉಚ್ಚಾಟಿಸುವ ಶಿಫಾರಸನ್ನು ಅನುಮೋದಿಸಿದೆ. ಆರು ಸದಸ್ಯರು ಶಿಫಾರಸಿನ ಪರ ಮತ್ತು ನಾಲ್ವರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ndtv ವರದಿ ಮಾಡಿದೆ.

ವರದಿಯಲ್ಲಿ ಆಕೆಯ ಕ್ರಮಗಳು "ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್" ಎಂದು ಆಕೆಯ ಸದಸ್ಯತ್ವವನ್ನು ರದ್ದುಗೊಳಿಸುವಂತೆ ನೈತಿಕ ಸಮಿತಿ ಸೂಚಿಸಿದೆ.

ಸಮಿತಿಯ ಶಿಫಾರಸನ್ನು ನಾಳೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News