×
Ad

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಕಹಿ ಅವಮಾನವನ್ನು ಅನುಭವಿಸಿದೆ : ಚಂಪೈ ಸೊರೇನ್

Update: 2024-08-18 20:00 IST

File Photo: PTI

ರಾಂಚಿ : ರಾಜ್ಯದ ಮುಖ್ಯಮಂತ್ರಿಯಾಗಿ ಕಹಿ ಅವಮಾನವನ್ನು ಅನುಭವಿಸಿದೆ ಎಂದು ರವಿವಾರ ಜೆಎಂಎಂ ನಾಯಕ ಚಂಪೈ ಸೊರೇನ್ ಹೇಳಿದ್ದಾರೆ.

ತಾನು ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂಬ ವದಂತಿಗಳು ಹರಡಿರುವ ಬೆನ್ನಿಗೇ ದಿಲ್ಲಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಚಂಪೈ ಸೊರೇನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ನಾನು ಜಾರಿಗೆ ತಂದಿದ್ದ ಕಾರ್ಯಕ್ರಮಗಳನ್ನು ಪಕ್ಷದ ನಾಯಕತ್ವವು ಜುಲೈ 3ರಂದು ನನ್ನ ಗಮನಕ್ಕೇ ತಾರದೆ ರದ್ದುಗೊಳಿಸಿತ್ತು ಎಂದು ಅವರು ಆರೋಪಿಸಿದರು.

“ನಾನು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಕಾರಣದ ಕುರಿತು ಪ್ರಶ್ನಿಸಿದಾಗ, ಜುಲೈ 3ರಂದು ಪಕ್ಷದ ಶಾಸಕರ ಸಭೆಯಿದ್ದು, ಅಲ್ಲಿಯವರೆಗೆ ನೀವು ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಲಾಯಿತು” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ಮತ್ತೊಬ್ಬ ವ್ಯಕ್ತಿಯು ಮುಖ್ಯಮಂತ್ರಿಯ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಕ್ಕಿಂತ ಹೆಚ್ಚು ಅಪಮಾನಕಾರಿ ಸಂಗತಿ ಮತ್ತೇನಿದೆ” ಎಂದು ಅವರು ಪ್ರಶ್ನಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News