×
Ad

ತೆಲಂಗಾಣದ ಔಷಧ ಘಟಕದಲ್ಲಿ ಸ್ಫೋಟ | 7 ಮಂದಿ ಸಾವು, ಹಲವರಿಗೆ ಗಾಯ

Update: 2024-04-03 22:48 IST

Photo: X \ @PintodeepakD

ಹೈದರಾಬಾದ್ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಹಾತ್ನೂರ ಮಂಡಲ್ನ ಚಂದ್ಲಾಪುರ ಗ್ರಾಮದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಬುಧವಾರ ಸ್ಫೋಟ ಸಂಭವಿಸಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ

‘‘ಔಷಧ ಕಂಪೆನಿಯಲ್ಲಿ ಸಂಜೆ 5 ಗಂಟೆಗೆ ರಿಯಾಕ್ಟರ್ ಸ್ಫೋಟಗೊಂಡಿತು. ಇದರಿಂದ ಕನಿಷ್ಠ 7 ಮಂದಿ ಮೃತಪಟ್ಟರು. ಕನಿಷ್ಠ 15ರಿಂದ 20 ಮಂದಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಸಮೀಪ ಇದ್ದ ಹಲವು ಕಟಡ್ಟಗಳಿಗೆ ಕೂಡ ಹಾನಿ ಉಂಟಾಗಿವೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News