×
Ad

ವಿಸ್ತೃತ ಸಿಂಧೂ ಯೋಜನೆ: ಹೆಚ್ಚುವರಿ ನೀರನ್ನು ಮೂರು ರಾಜ್ಯಗಳಿಗೆ ಹರಿಸಲು 113 ಕಿ.ಮೀ ಕಾಲುವೆ

Update: 2025-06-16 08:15 IST

PC: x.com/erbmjha

ಹೊಸದಿಲ್ಲಿ: ಸಿಂಧೂ ನದಿ ವ್ಯವಸ್ಥೆಯ ಹೆಚ್ಚುವರಿ ನೀರನ್ನು ಬಳಸಲು ತ್ವರಿತ ಅಲ್ಪಾವಧಿ ಕ್ರಮಗಳನ್ನು ಕೈಗೊಂಡ ಭಾರತ, ವಿಸ್ತøತವಾದ ಅಂತರ ಜಲಾನಯನ ಜಲ ವರ್ಗಾವಣೆಯ ವಿಸ್ತøತ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ 113 ಕಿಲೋಮೀಟರ್ ಉದ್ದದ ಕಾಲುವೆಯನ್ನು ನಿರ್ಮಿಸಿ, ಹೆಚ್ಚುವರಿ ನೀರನ್ನು ಜಮ್ಮು& ಕಾಶ್ಮೀರದಿಂದ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನಕ್ಕೆ ವರ್ಗಾಯಿಸುವ ಕಾರ್ಯಸಾಧ್ಯತೆಗಳ ಬಗ್ಗೆ ಅಧ್ಯಯನ ಆರಂಭಿಸಿದೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉಝ್ ವಿವಿಧೋದ್ದೇಶ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರದ ಕಟೂವಾದಲ್ಲಿ ಅನುಷ್ಠಾನಕ್ಕೆ ತರುವ ಬಗ್ಗೆಯೂ ಕೇಂದ್ರ ಚಿಂತನೆ ನಡೆಸಿದೆ.

ಚೇನಾಬ್ ನದಿಯನ್ನು ರಾವಿ-ಬಿಯಾಸ್-ಸಟ್ಲೇಜ್ ನದಿಗಳ ಜತೆ ಈ ನೂತನ ಕಾಲುವೆ ಸಂಪರ್ಕಿಸಲಿದ್ದು, ಇದು ಪೂರ್ವ ನದಿಗಳ (ರಾವಿ, ಬಿಯಾಸ್ ಮತ್ತು ಸಟ್ಲೇಜ್) ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ಜತೆಗೆ, ಸಿಂಧೂ ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಹರಿಯುವ ಪಶ್ಚಿಮ ನದಿಗಳ ಅಂದರೆ ಸಿಂಧೂ, ಜೇಲಂ ಮತ್ತು ಚೆನಾಬ್ ನದಿಗಳ ನೀರಿನಲ್ಲಿ ಭಾರತಕ್ಕೆ ಹಂಚಿಕೆಯಾದ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಸಿಂಧೂ ನದಿ ನೀರನ್ನು ರಾಜಸ್ಥಾನದ ಶ್ರೀಗಂಗಾನಗರ ಪ್ರದೇಶಕ್ಕೆ ಮೂರು ವರ್ಷಗಳ ಒಳಗಾಗಿ ಕಾಲುವೆ ಮೂಲಕ ಹರಿಸಲಾಗುವುದು ಎಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆನೀಡಿದ್ದರು. ಈ ನೀರಾವರಿ ಸೌಲಭ್ಯ ಪಾಕಿಸ್ತಾನ ತನ್ನ ಪಾಲಿನ ಎಲ್ಲ ನೀರು ಬಳಸಿಕೊಂಡರೂ ಭಾರತದ ದೊಡ್ಡ ಭೂಪ್ರದೇಶಕ್ಕೆ ಪ್ರಯೋಜನವಾಗಲಿದೆ ಎಂದು ಹೇಳಿದ್ದರು.

ಈ ನಿಟ್ಟಿನಲ್ಲಿ ಚೆಜಾಬ್-ರಾವಿ-ಬಿಯಾಸ್-ಸಟ್ಲೇಜ್ ಜೋಡಣೆ ಯೋಜನೆಯ ಪರಿಕಲ್ಪನೆ ರೂಪುಗೊಂಡಿದೆ. ಇದು ಪ್ರಸ್ತುತ ಇರುವ ಕಾಲುವೆಯನ್ನು ಜಮ್ಮು, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ 13 ಕಡೆಗಳಲ್ಲಿ ಸಂಪರ್ಕಿಸಲಿದೆ. ಈ ಮೂಲಕ ಇಂದಿರಾ ಗಾಂಧೀ ಕಾಲುವೆಗೆ ನೀರು ಹರಿಯಲಿದೆ ಎಂದು ಮೂಲಗಳು ವಿವರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News