×
Ad

ಪ್ರಥಮ ಟೆಸ್ಟ್: ನ್ಯೂಝಿಲ್ಯಾಂಡ್ ವಿರುದ್ಧ ಬಾಂಗ್ಲಾದೇಶಕ್ಕೆ 150 ರನ್ ಗೆಲುವು

Update: 2023-12-02 18:57 IST

Photo: @BCBtigers \X 

ಸೈಲ್ಹೆಟ್: ಶನಿವಾರ ಅಂತ್ಯಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ ತೈಜುಲ್ ಇಸ್ಲಾಂ ಒಟ್ಟು 10 ವಿಕೆಟ್ ಗಳನ್ನು ಕಬಳಿಸುವ ಮೂಲಕ ನ್ಯೂಝಿಲ್ಯಾಂಡ್ ವಿರುದ್ಧ ಬಾಂಗ್ಲಾದೇಶ 150 ರನ್ ಗಳ ಭರ್ಜರಿ ಜಯ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ತವರು ನೆಲದಲ್ಲಿ ಬಾಂಗ್ಲಾದೇಶವು ಐತಿಹಾಸಿಕ ಗೆಲುವು ದಾಖಲಿಸಿದೆ.

ಪ್ರಥಮ ಇನಿಂಗ್ಸ್ ನಲ್ಲಿ 4 ವಿಕೆಟ್ ಗಳಿಸಿದ್ದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ, ಎರಡನೆಯ ಇನಿಂಗ್ಸ್ ನಲ್ಲಿ 75 ರನ್ ನೀಡಿ ಆರು ವಿಕೆಟ್ ಗಳನ್ನು ಕಬಳಿಸುವ ಮೂಲಕ ನ್ಯೂಝಿಲೆಂಡ್ ತಂಡವನ್ನು 181 ರನ್ ಗಳಿಗೆ ಕಟ್ಟಿ ಹಾಕಿದರು.

332 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ಪ್ರವಾಸಿಗರು, ನಾಲ್ಕನೆಯ ದಿನದ ಆಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು ಕೇವಲ 113 ರನ್ ಗಳಿಸಿ, ಸಂಕಷ್ಟಕ್ಕೆ ಸಿಲುಕಿದ್ದರು.

ಇಂದು ಆಟ ಮುಂದುವರಿಸಿದ ಪ್ರವಾಸಿ ನ್ಯೂಝಿಲ್ಯಾಂಡ್ ತಂಡವು, ಪಂದ್ಯದ ಕೊನೆಯ ದಿನದಂದು ತನ್ನ ಹಿಂದಿನ ದಿನದ ಮೊತ್ತಕ್ಕೆ ಕೇವಲ 68 ರನ್ ಗಳನ್ನು ಸೇರ್ಪಡೆ ಮಾಡಲಷ್ಟೆ ಶಕ್ತವಾಯಿತು. 58 ರನ್ ಗಳಿಸಿದ ಡೇರಿಲ್ ಮಿಚೆಲ್, ನ್ಯೂಝಿಲ್ಯಾಂಡ್ ತಂಡದ ಪರವಾಗಿ ಅತ್ಯಧಿಕ ಮೊತ್ತ ಕಲೆ ಹಾಕಿದ ಏಕೈಕ ಬ್ಯಾಟರ್ ಆದರು. ಎರಡನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಡಿಸೆಂಬರ್ 6ರಿಂದ ಪ್ರಾರಂಭಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News