ಮುಂಬೈ: ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದು ಐವರು ಮೃತ್ಯು, ಹಲವರಿಗೆ ಗಾಯ
Update: 2025-06-09 11:26 IST
ಸಾಂದರ್ಭಿಕ ಚಿತ್ರ (PTI)
ಮುಂಬೈ: ಕಿಕ್ಕಿರಿದು ತುಂಬಿದ್ದ ಮುಂಬೈ ರೈಲಿನಿಂದ ಬಿದ್ದು ಐವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಪುಷ್ಪಕ್ ಎಕ್ಸ್‌ಪ್ರೆಸ್ ಕಸರಾಗೆ ತೆರಳುತ್ತಿದ್ದಾಗ, ಕೇಂದ್ರ ರೈಲ್ವೆ ವಲಯದ ದಿವಾ ಹಾಗೂ ಕೋಪಾರ್ ರೈಲ್ವೆ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ರೈಲು ಕಿಕ್ಕಿರಿದು ತುಂಬಿತ್ತು ಹಾಗೂ ಈ ಘಟನೆ ನಡೆದಾಗ ಜನರು ರೈಲಿನ ಬಾಗಿಲಿನಲ್ಲಿ ನೇತಾಡುತ್ತಿದ್ದರು ಎನ್ನಲಾಗಿದೆ. ರೈಲ್ವೆ ಹಳಿಗಳ ಮೇಲೆ ಬಿದ್ದು ಗಾಯಗೊಂಡಿದ್ದ ಪ್ರಯಾಣಿಕರನ್ನು ತಕ್ಷಣವೇ ಕಲ್ವಾದಲ್ಲಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಪೈಕಿ ಐವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.