×
Ad

ಮುಂಬೈ ಮಾಜಿ ವೇಗದ ಬೌಲರ್ ಅಬ್ದುಲ್ ಇಸ್ಮಾಯೀಲ್ ನಿಧನ

Update: 2025-05-31 22:19 IST

PC : X 

ಮುಂಬೈ: ‘ಕಿಂಗ್ ಆಫ್ ಸ್ವಿಂಗ್ ಬೌಲಿಂಗ್’ಎಂದೇ ಖ್ಯಾತಿ ಪಡೆದಿದ್ದ ಮುಂಬೈ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಅಬ್ದುಲ್ ಇಸ್ಮಾಯೀಲ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

60 ಹಾಗೂ 70ರ ದಶಕದಲ್ಲಿ ಸತತ 15 ರಣಜಿ ಟ್ರೋಫಿ ಪ್ರಶಸ್ತಿಗಳನ್ನು ಜಯಿಸಿದ್ದ ಮುಂಬೈ ತಂಡದ ಭಾಗವಾಗಿದ್ದ ಇಸ್ಮಾಯೀಲ್ ಮುಂಬೈನ ಒಶಿವಾರಾದ ನಿವಾಸಿಯಾಗಿದ್ದಾರೆ. ಟ್ಯಾಕ್ಸಿ ಚಾಲಕನ ಮಗನಾಗಿರುವ ಇಸ್ಮಾಯೀಲ್ 1945ರಲ್ಲಿ ಜನಿಸಿದ್ದರು. 75 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 18.04ರ ಸರಾಸರಿಯಲ್ಲಿ 244 ವಿಕೆಟ್‌ ಗಳನ್ನು ಉರುಳಿಸಿದ್ದರು. ಆದರೆ ಅವರು ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ಪಡೆಯಲಿಲ್ಲ. ಇಸ್ಮಾಯೀಲ್ ರ ಪುತ್ರ ಆಸೀಫ್ ಡೇವಿಸ್ ಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

‘‘ಮುಂಬೈ ಕ್ರಿಕೆಟ್ ಹಾಗೂ ಪ್ರಸಿದ್ಧ ಶಿವಾಜಿ ಪಾರ್ಕ್ ಜಿಮ್ಖಾನಾಕ್ಕೆ ಅವರ ಕೊಡುಗೆ ಅದ್ಭುತವಾಗಿದೆ’’ ಎಂದು ಭಾರತದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ತಿಳಿಸಿದ್ದಾರೆ.

‘‘ಮುಂಬೈ ಕ್ರಿಕೆಟ್ ನ ತ್ರಿಮೂರ್ತಿಗಳಾದ ಅಬ್ದುಲ್ ಇಸ್ಮಾಯೀಲ್, ಪ್ಯಾಡಿ ಶಿವಾಲ್ಕರ್ ಹಾಗೂ ಮಿಲಿಂದ್ ರೇಗೆ ಅವರು ಕಳೆದ 2 ತಿಂಗಳ ಅವಧಿಯಲ್ಲಿ ನಿಧನರಾಗಿರುವುದು ತುಂಬಾ ದುಃಖಕರವಾಗಿದೆ. ನಾನು ಈ ಮೂವರೊಂದಿಗೆ ನನ್ನ ವೃತ್ತಿಜೀವನ ಆರಂಭಿಸಿದ್ದೆ. ಮುಂಬೈ ಪರ ನನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 44 ಓವರ್ ಬೌಲಿಂಗ್ ಮಾಡಿದ್ದಾಗ ಅಬ್ದುಲ್ ನನಗೆ ಮಾರ್ಗದರ್ಶನ ನೀಡಿದ್ದರು’’ ಎಂದು ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸಂದೀಪ್ ಪಾಟೀಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News