×
Ad

ನಾಲ್ಕು ವರ್ಷದ ಪುತ್ರನ ಹತ್ಯೆ ಪ್ರಕರಣ | ಎಐ ಸ್ಟಾರ್ಟ್ಅಪ್ ಸಿಇಓ ಸುಚನಾ ವಿರುದ್ಧ ಚಾರ್ಜ್ ಶೀಟ್

Update: 2024-04-03 22:36 IST

ಸುಚನಾ ಸೇಥ್ | Photo: X / Suchana Seth

ಪಣಜಿ : ತನ್ನ ನಾಲ್ಕು ವರ್ಷ ವಯಸ್ಸಿನ ಪುತ್ರನನ್ನು ಹತ್ಯೆಗೈದ ಕೃತಕ ಬುದ್ದಿಮತ್ತೆ ಸ್ಟಾರ್ಟ್ಅಪ್ ಕಂಪೆನಿಯೊಂದರ ಸಿಇಓ ಸುಚನಾ ಸೇಥ್ ವಿರುದ್ಧ ಗೋವಾ ಪೊಲೀಸರು ಬುಧವಾರ ದೋಷಾರೋಪಪಟ್ಟಿ ದಾಖಲಿಸಿಕೊಂಡಿದ್ದಾರೆ. ಗೋವಾದ ಕಾಂಡೊಲಿಮ್ನಲ್ಲಿರುವ ತನ್ನ ಅಪಾರ್ಟ್ಮೆಂಟ್ ನಲ್ಲಿ ಪುತ್ರನನ್ನು ಜನವರಿ 6ರಂದು ಸೇಥ್ ಕತ್ತು ಹಿಸುಕಿ ಕೊಲೆ ಮಾಡಿದ್ದಳು.ಮರುದಿನ ಆಕೆ ಮೃತದೇಹವನ್ನು ಬ್ಯಾಗೊಂದರಲ್ಲಿ ಸಾಗಿಸುತ್ತಿದ್ದಾಗ, ಚಿತ್ರದುರ್ಗದ ಬಳಿ ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು 59 ಮಂದಿಯನ್ನು ಸಾಕ್ಷಿಗಳನ್ನಾಗಿ ಚಾರ್ಜ್ ಶೀಟ್ ನಲ್ಲಿ ಹೆಸರಿಸಿದ್ದಾರೆ ಹಾಗೂ ಸೇಥ್ ಳ ಪರಿತ್ಯಕ್ತ ಪತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ಕೌಟುಂಬಿಕ ನ್ಯಾಯಾಲಯದ ಆದೇಶದ ಹೊರತಾಗಿಯೂ ಸುಚನಾಳು ತಮ್ಮ ಪುತ್ರನನ್ನು ನೋಡುವುದಕ್ಕೆ ತನಗೆ ಅವಕಾಶ ನೀಡುತ್ತಿರಲಿಲ್ಲವೆಂದು ಆಕೆಯ ಪರಿತ್ಯಕ್ತ ಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿ ಸುಚನಾಳನ್ನು ಪ್ರಸಕ್ತ ಗೋವಾದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News