×
Ad

ಪುರಿ ಸಮುದ್ರದಲ್ಲಿ ಸ್ಪೀಡ್‌ಬೋಟ್‌ ನಿಂದ ಬಿದ್ದು ಗಂಗುಲಿ ಅಣ್ಣ, ಅತ್ತಿಗೆ ಸ್ವಲ್ಪದರಲ್ಲಿ ಪಾರು

Update: 2025-05-26 22:31 IST

PC : PTI 

ಹೊಸದಿಲ್ಲಿ: ಒಡಿಶಾದ ಪುರಿಯಲ್ಲಿ ಸಮುದ್ರದಲ್ಲಿ ಸ್ಪಿಡ್‌ಬೋಟ್‌ನಲ್ಲಿ ವಿಹರಿಸುತ್ತಿದ್ದಾಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿಯ ಅಣ್ಣ ಸ್ನೇಹಸೀಶ್ ಗಂಗುಲಿ ಮತ್ತು ಅವರ ಪತ್ನಿ ಅರ್ಪಿತಾ ನೀರಿಗೆ ಬಿದ್ದಿದ್ದು ಸ್ವಲ್ಪದರಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿದ್ದಾರೆ.

ಶನಿವಾರ ಸಂಜೆ ದಂಪತಿ ವಿಹರಿಸುತ್ತಿದ್ದ ಸ್ಪೀಡ್‌ ಬೋಟ್‌ ಗೆ ಬೃಹತ್ ಅಲೆಯೊಂದು ಬಡಿದಿದ್ದು, ದೋಣಿ ಅಡಿಮೇಲಾಗಿ ಬಿದ್ದಿದೆ. ಅವರು ಸಮುದ್ರದ ನೀರಿಗೆ ಬಿದ್ದರು.

ಬೀಚ್‌ ನಲ್ಲಿ ನಿಯೋಜಿಸಲ್ಪಟ್ಟಿದ್ದ ಜೀವರಕ್ಷಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದೋಣಿಯಲ್ಲಿದ್ದ ಎಲ್ಲರನ್ನೂ ರಕ್ಷಿಸಿದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ದೋಣಿಯನ್ನು ತರಬೇತಿ ಇಲ್ಲದ ಸಿಬ್ಬಂದಿ ಚಲಾಯಿಸುತ್ತಿದ್ದರು ಹಾಗೂ ಅವರಿಗೆ ದೊಡ್ಡ ಅಲೆಗಳನ್ನು ನಿಭಾಯಿಸುವುದು ಹೇಗೆಂದು ಗೊತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News