×
Ad

ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ ಗೌತಮ್‌ ಗಂಭೀರ್‌

Update: 2024-03-02 11:02 IST

ಗೌತಮ್‌ ಗಂಭೀರ್‌ (PTI)

ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಪೂರ್ವ ದಿಲ್ಲಿ ಕ್ಷೇತ್ರದ ಸಂಸದರಾಗಿರುವ ಗಂಭೀರ್‌ ʼಎಕ್ಸ್‌ʼ ಖಾತೆಯ ಮೂಲಕ ತಮ್ಮ ನಿರ್ಧಾರವನ್ನು ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. ಮುಂದೆ ಕ್ರಿಕೆಟ್‌ ಕ್ಷೇತ್ರದತ್ತ ಹೆಚ್ಚಿನ ಗಮನ ನೀಡುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ರಾಜಕಾರಣ ಪ್ರವೇಶಿಸುವುದಕ್ಕೆ ಮುನ್ನ ತಾವಿದ್ದ ಕ್ಷೇತ್ರದತ್ತ ಮತ್ತೆ ಗಮನ ಹರಿಸುವುದು ಈಗ ಅವರ ಉದ್ದೇಶವೆಂದು ತಿಳಿಯಲಾಗಿದೆ.

“ನನ್ನನ್ನು ನನ್ನ ರಾಜಕೀಯ ಕರ್ತವ್ಯಗಳಿಂದ ಬಿಡುಗಡೆಗೊಳಿಸುವ ಮೂಲಕ ಮುಂಬರುವ ಕ್ರಿಕೆಟ್‌ ಕ್ಷೇತ್ರದಲ್ಲಿರುವ ನನ್ನ ಜವಾಬ್ದಾರಿಗಳತ್ತ ಗಮನ ಹರಿಸಲು ನನಗೆ ಅನುವು ಮಾಡಿಕೊಡಬೇಕೆಂದು ಸನ್ಮಾನ್ಯ ಪಕ್ಷಾಧ್ಯಕ್ಷರಾದ ಜೆ.ಪಿ. ನಡ್ಡಾ ಜೀ ಅವರನ್ನು ವಿನಂತಿಸಿದ್ದೇನೆ. ಜನರ ಸೇವೆಗೆ ನನಗೆ ಅವಕಾಶ ನೀಡಿದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಧನ್ಯವಾದಗಳು,” ಎಂದು ಗಂಭೀರ್‌ ಟ್ವೀಟ್‌ ಮಾಡಿದ್ದಾರೆ.

ಮಾರ್ಚ್‌ 2019 ರಲ್ಲಿ ಗಂಭೀರ್‌ ಬಿಜೆಪಿ ಸೇರಿದ್ದರು. 2019 ಲೋಕಸಭಾ ಚುನಾವಣೆಯಲ್ಲಿ 6,95,109 ಮತಗಳ ಅಂತರದಿಂದ ಅವರು ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಜಯ ಗಳಿಸಿದ್ದರು.

ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗಂಭೀರ್‌ ಅವರಿಗೆ ಸ್ಪರ್ಧಿಸಲು ಪಕ್ಷದ ಟಿಕೆಟ್‌ ದೊರೆಯದೇ ಇರಬಹುದೆಂಬ ವರದಿಗಳ ನಡುವೆ ಸಕ್ರಿಯ ರಾಜಕಾರಣ ತೊರೆಯುವ ಅವರ ನಿರ್ಧಾರ ಪ್ರಕಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News