×
Ad

ಗೋಧ್ರಾ ರೈಲು ದಹನ ಪ್ರಕರಣ | ತಲೆಮರೆಸಿಕೊಂಡ ದೋಷಿಯ ಬಂಧನ

Update: 2025-02-03 21:23 IST

ಸಾಂದರ್ಭಿಕ ಚಿತ್ರ | PC : PTI

ಪುಣೆ, : ಪರೋಲ್ ಸಂದರ್ಭ ಪರಾರಿಯಾದ ಹಾಗೂ ನಾಪತ್ತೆಯಾದ 2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ 55 ವರ್ಷದ ದೋಷಿಯನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯಿಂದ ಕಳವು ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪುಣೆ ಗ್ರಾಮೀಣ ಪೊಲೀಸರು ಜನವರಿ 22ರಂದು ಸಲೀಮ್ ಜರ್ದಾನನ್ನು ಬಂದಿಸಿದ್ದಾರೆ. ಈತ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ 31 ಮಂದಿ ದೋಷಿಗಳಲ್ಲಿ ಓರ್ವ ಎಂದು ಅವರು ಹೇಳಿದ್ದಾರೆ.

ಜರ್ದಾ 7 ದಿನಗಳ ಪರೋಲ್‌ನಲ್ಲಿ 2024 ಸೆಪ್ಟಂಬರ್ 17ರಂದು ಗುಜರಾತ್‌ನ ಕಾರಾಗೃಹದಿಂದ ಹೊರಬಂದಿದ್ದ. ಅನಂತರ ತಲೆಮರೆಸಿಕೊಂಡಿದ್ದ.

‘‘ನಾವು ಕಳವು ಪ್ರಕರಣವೊಂದರಲ್ಲಿ ಆತ ಹಾಗೂ ಆತನ ತಂಡವನ್ನು ಜನವರಿ 22ರಂದು ಬಂಧಿಸಿದ್ದೆವು. ತನಿಖೆಯ ವೇಳೆ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಆತ ಸಂಬಂಧ ಹೊಂದಿರುವುದು ಬೆಳಕಿಗೆ ಬಂತು’’ ಎಂದು ಆಲೆಫಾಟಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿನೇಶ್ ತಾಯ್ಡೆ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News