ಮತ್ತೆ ಏರಿಳಿತದ ಹಾದಿ ಹಿಡಿದ ಚಿನ್ನದ ದರ : ಇಂದಿನ ಬೆಲೆ ಎಷ್ಟಿದೆ?
Update: 2025-10-30 22:19 IST
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸ ದಿಲ್ಲಿ: ಅಮೆರಿಕದ ಫೆಡರಲ್ ಬ್ಯಾಂಕ್ ಪ್ರಮುಖ ಬಡ್ಡಿ ದರಗಳನ್ನು ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದೆ.
ಈ ತಿಂಗಳಲ್ಲಿ ಅತ್ಯಂತ ಚಂಚಲವಾಗಿದ್ದ ಚಿನ್ನದ ದರವಿಂದು(ಗುರುವಾರ) ನಿನ್ನೆಯ ದರಕ್ಕೆ ಹೋಲಿಸಿದರೆ, ಕೊಂಚ ಮಟ್ಟಿಗೆ ಇಳಿಕೆ ಪ್ರವೃತ್ತಿ ಪ್ರದರ್ಶಿಸಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 191 ರೂ.ನಷ್ಟು ಇಳಿಕೆಯಾಗಿ, 12,049 ರೂ. ತಲುಪಿದೆ. ಅದೇ ರೀತಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 175 ರೂ.ನಷ್ಟು ಇಳಿಕೆಯಾಗಿ 11,045 ರೂ.ಗೆ ತಲುಪಿದೆ. ಪ್ರತಿ 10 ಗ್ರಾಂ 18 ಕ್ಯಾರೆಟ್ ಚಿನ್ನದ ದರದಲ್ಲಿ 143 ರೂ. ಇಳಿಕೆಯಾಗಿ 9,037 ರೂ.ಗೆ ತಲುಪಿದೆ.