ಚಿನ್ನದ ನಾಗಾಲೋಟ ಮುಂದುವರಿಕೆ; ಇಂದಿನ ಚಿನ್ನದ ದರವೆಷ್ಟು?
ಸಾಂದರ್ಭಿಕ ಚಿತ್ರ
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ 1.40 ಲಕ್ಷ ಗಡಿ ದಾಟಿದ ಹತ್ತು ಗ್ರಾಂ ಚಿನ್ನದ ದರ! ಚಿನ್ನ ಮತ್ತು ಬೆಳ್ಳಿ ಸಾರ್ವಕಾಲಿಕ ಅತ್ಯಧಿಕ ದರದಲ್ಲಿ ಮುಂದುವರಿಯುತ್ತಿದೆ.
ಮಂಗಳವಾರ ಜನವರಿ 13ರಂದು ಮತ್ತೆ ಚಿನ್ನದ ಬೆಲೆ ನಾಗಾಲೋಟದಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟು, ಡಾಲರ್- ರೂಪಾಯಿ ಅಸ್ಥಿರತೆ ಮತ್ತು ಹೂಡಿಕೆದಾರರ ಸುರಕ್ಷಿತ ಹೂಡಿಕೆಯ ಆಸಕ್ತಿ ಕಾರಣದಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತ ಮುಂದುವರಿದಿದೆ. ವಿಶ್ಲೇಷಕರ ಪ್ರಕಾರ ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿತ ಮಾಡುವ ಒತ್ತಡಕ್ಕೆ ಬೀಳಲಿದೆ ಎನ್ನುವ ನಿರೀಕ್ಷೆಯಿಂದಾಗಿ ಚಿನ್ನದ ದರ ಏರುತ್ತಿದೆ.
ದಿಲ್ಲಿಯಲ್ಲಿ ಶುಕ್ರವಾರ 1,41,700 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಸೋಮವಾರ ರೂ. 2900 ಹೆಚ್ಚಳದೊಂದಿಗೆ 1,44600 ರೂ. ಆಗಿದೆ. ಬೆಂಗಳೂರಿನಲ್ಲೂ 1,40,460 ರೂ. ಇದ್ದ ಚಿನ್ನದ ದರ 1,690 ರೂ. ಹೆಚ್ಚಳದೊಂದಿಗೆ ಸೋಮವಾರ 1,42,150 ರೂ.ಗೆ ತಲುಪಿದೆ.
ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಬೆಂಗಳೂರಿನಲ್ಲಿ 1,42,160 ರೂ. ಇದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ದರ 1,30,310 ರೂ. ಇದೆ.
ಜನವರಿ ಮೊದಲ ದಿನದಿಂದಲೇ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದಿತ್ತು. ಮಧ್ಯದಲ್ಲಿ ಒಂದೆರಡು ದಿನ ಅಲ್ಪ ಮಟ್ಟಿಗೆ ಕುಸಿತದ ನಂತರ ಚಿನ್ನ ಮತ್ತು ಬೆಳ್ಳಿ ದರಗಳು ನಾಗಾಲೋಟ ಮುಂದುವರಿಸಿವೆ. ಜನವರಿ 9ರ ನಂತರ ಚಿನ್ನದ ದರಗಳು ಮೇಲ್ಮುಖವಾಗಿಯೇ ಸಾಗುತ್ತಿವೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಮಂಗಳವಾರ ಜನವರಿ 13ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,253 (+38) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,065 (+35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,690 (+29) ರೂ. ಬೆಲೆಗೆ ತಲುಪಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ದರ (ಬೆಳಿಗ್ಗೆ)
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 1,42,160 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,30,310 ರೂ.
ವಿಜಯವಾಡ/ವಿಶಾಖಪಟ್ಟಣ: 24 ಕ್ಯಾರೆಟ್ ಚಿನ್ನದ ದರ 1,42,160 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,30,310 ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 1,43,140 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,31,210 ರೂ.
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 1,42,310 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,30,460 ರೂ.
ಬೆಳ್ಳಿದರ ಪ್ರತಿ ಕೆಜಿಗೆ
ಬೆಂಗಳೂರು: 2,70,100 ರೂ.
ದಿಲ್ಲಿ: 2,70,100 ರೂ.
ಹೈದರಾಬಾದ್: 2,87,100 ರೂ.
ಚೆನ್ನೈ: 2,87,100 ರೂ.