ಸತತವಾಗಿ ಏರು ಹಾದಿಯಲ್ಲಿರುವ ಬಂಗಾರ; 22 ಕ್ಯಾರೆಟ್ ಚಿನ್ನಕ್ಕೆ 11, 960 ರೂ.
ಸಾಂದರ್ಭಿಕ ಚಿತ್ರ (AI)
ವಾರಾಂತ್ಯದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ ಡಿಸೆಂಬರ್ ಮೊದಲೆರಡು ವಾರದಲ್ಲಿ ಇನ್ನಷ್ಟು ಏರುವ ಸಾಧ್ಯತೆ ಇದೆ.
ಆಭರಣ ಖರೀದಿದಾರರಿಗೆ ಮತ್ತೆ ಆಘಾತಕಾರಿ ಸುದ್ದಿ ಬಂದಿದೆ. ಬಂಗಾರ ಮತ್ತು ಬೆಳ್ಳಿಯ ಬೆಲೆ ಬಂಪರ್ ಜಿಗಿತ ಕಾಣಲಿದೆ. ಚಿನ್ನದ ಬೆಲೆಗಳು ಸತತವಾಗಿ ಏರಿಕೆ ಕಂಡಿರುವುದು ಮದುವೆ- ಮಂಗಳ ಕಾರ್ಯಕ್ರಮಗಳ ಋತುವಿನಲ್ಲಿ ಗ್ರಾಹಕರ ಜೇಬಿಗೆ ಹೆಚ್ಚಿನ ಕತ್ತರಿ ಬೀಳುತ್ತಿದೆ.
ಸೋಮವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಇನ್ನಷ್ಟು ಏರಿದೆ. 22 ಕ್ಯಾರೆಟ್ ಚಿನ್ನಕ್ಕೆ 11, 960 (+60), 18 ಕ್ಯಾರೆಟ್ ಚಿನ್ನಕ್ಕೆ 9,786(+49) ಮತ್ತು 24 ಕ್ಯಾರೆಟ್ ಚಿನ್ನಕ್ಕೆ 13,048(+66) ತಲುಪಿದೆ. ಕಳೆದ ನಾಲ್ಕೈದು ವಹಿವಾಟುಗಳಲ್ಲಿ ಬಂಗಾರ ಸೇರಿದಂತೆ ವಿಶ್ವದ ಅಮೂಲ್ಯ ಲೋಹಗಳು ಏರುಹಾದಿಯಲ್ಲಿವೆ.
ಅಮೂಲ್ಯ ಎನಿಸಿರುವ ಆಭರಣಗಳು ದುಬಾರಿ ಸರಕುಗಳ ಪಟ್ಟಿಗೆ ಸೇರುತ್ತಿವೆ. ಡಿಸೆಂಬರ್ ಮೊದಲೆರಡು ವಾರದಲ್ಲಿ ಚಿನ್ನದ ದರಗಳು ಇನ್ನಷ್ಟು ದಾಖಲೆ ಏರಿಕೆ ಕಾಣುವ ಬಗ್ಗೆ ಹೂಡಿಕೆದಾರರು ನಿರೀಕ್ಷೆಯಲ್ಲಿದ್ದಾರೆ.
ರಿಸರ್ವ್ ಬ್ಯಾಂಕ್ ಮೇಲೆ ಕಣ್ಣು
ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್‌ಬಿಐ) ಹಣಕಾಸು ನೀತಿ ಸಭೆಯ ತೀರ್ಮಾನಗಳು ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಪ್ರಮುಖ ಬಡ್ಡಿದರದ ಮೇಲೆ ಕೈಗೊಳ್ಳುವ ತೀರ್ಮಾನಗಳ ಮೇಲೆ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೂಡಿಕೆದಾರರು ನಿರೀಕ್ಷೆಯಲ್ಲಿದ್ದಾರೆ.
ಡಿಸೆಂಬರ್ 9-10ರಂದು ಅಮರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಭೆ ನಡೆಸಲಿದೆ. ಬಡ್ಡಿದರ ಇಳಿಸುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣದಿಂದ ಡಾಲರ್ ಸೂಚ್ಯಂಕ ಮತ್ತು ಬಾಂಡ್ ಇಳುವರಿ ಬೇಡಿಕೆ ಕಡಿಮೆಯಾಗಿದೆ, ಆದರೆ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಹೂಡಿಕೆದಾರರು ಚಿನ್ನದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.
ಪ್ರಮುಖ ಬಡ್ಡಿದರಗಳ ಕುರಿತು ಮುಂಬರುವ ಪ್ರಮುಖ ಆರ್ಥಿಕ ನಿರ್ಧಾರಗಳ ನಡುವೆ ವ್ಯಾಪಾರಿಗಳು ದತ್ತಾಂಶ ಬಿಡುಗಡೆಯನ್ನೂ ಹೂಡಿಕೆದಾರರು ಗಮನಿಸುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ ಮತ್ತು ಆರ್‌ಬಿಐ ಹಣಕಾಸು ನೀತಿ ಸಭೆಯ ಬೆಳವಣಿಗೆಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಲಿದೆ.
ಚಿನ್ನವು ಸ್ಥಿರವಾದ ವ್ಯಾಪ್ತಿಯಲ್ಲಿ ವ್ಯವಹರಿಸುವ ಸಮಯ ಕಳೆದು ಹೋಗಿದ್ದು, ಕ್ರೂಢೀಕರಣ ವ್ಯಾಪ್ತಿಯಿಂದ ಹೊರಗೆ ಬಂದಿದೆ. ಹೂಡಿಕೆದಾರರು ವಿವಿಧ ಪ್ರದೇಶಗಳ ಉತ್ಪಾದನೆ ಮತ್ತು ಸೇವೆಗಳ ಪಿಎಂಐ ದತ್ತಾಂಶ, ಅಮೆರಿಕದ ಉದ್ಯೋಗ ದತ್ತಾಂಶ ಮತ್ತು ಗ್ರಾಹಕರ ಭಾವನೆಗಳ ಮೇಲೆ ಕೇಂದ್ರೀಕರಿಸುವುದರಿಂದ ಬಲವರ್ಧನೆ ವ್ಯಾಪ್ತಿಯಿಂದ ಹೊರಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಮತ್ತೆ ಗರಿಷ್ಠ ಮಟ್ಟದತ್ತ ಜಿಗಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ವಾರಾಂತ್ಯದಲ್ಲಿ ಚಿನ್ನದ ಬೆಲೆ ಏರಿಕೆ!
ಶನಿವಾರ ಮತ್ತು ಭಾನುವಾರದಲ್ಲಿ ಚಿನ್ನ-ಬೆಳ್ಳಿ ಬೆಲೆ ಮತ್ತೆ ದಾಖಲೆಯ ಮಟ್ಟಿಗೆ ಏರಿಕೆ ಕಂಡಿದೆ. ವೀಕೆಂಡ್ ನಲ್ಲಿ ಚಿನ್ನ-ಬೆಳ್ಳಿ ಬೆಲೆ ಭಾರೀ ಜಿಗಿತ ಕಂಡಿದೆ. 10 ಗ್ರಾಂ ಬಂಗಾರದ ಬೆಲೆ ರೂ 1360 ರಷ್ಟು ಏರಿಕೆ ಕಂಡಿದೆ. ಬೆಳ್ಳಿಯಂತೂ ಒಂದೇ ದಿನದಲ್ಲಿ ಕೆಜಿಗೆ ರೂ 9000 ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟದ ಕಡೆಗೆ ಮುನ್ನುಗ್ಗುತ್ತಿವೆ. ಕಳೆದ ಆರು ತಿಂಗಳಲ್ಲಿ ಶೇ 25ರಷ್ಟು ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ (ಶನಿವಾರ- ಭಾನುವಾರ) ಶೇ 4ರಷ್ಟು ಏರಿಕೆಯಾಗಿದೆ.