ಏರುಹಾದಿಯಲ್ಲಿದ್ದ ಚಿನ್ನದ ದರ ಅಲ್ಪ ಮಟ್ಟಿಗೆ ಕುಸಿತ; ಇಂದಿನ ಚಿನ್ನದ ದರವೆಷ್ಟು?
ಸಾಂದರ್ಭಿಕ ಚಿತ್ರ
ವಾರಾಂತ್ಯದಲ್ಲಿ ಪ್ರಕಟವಾಗಲಿರುವ ಪ್ರಮುಖ ಅಮೆರಿಕದ ಆರ್ಥಿಕ ದತ್ತಾಂಶಕ್ಕಾಗಿ ವ್ಯಾಪಾರಿಗಳು ಕಾಯುತ್ತಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಿದರೆ, ಚಿನ್ನದ ಬೇಡಿಕೆ ಕಡಿಮೆಯಾಗಬಹುದು.
ಬುಧವಾರ ಮಧ್ಯಾಹ್ನದಿಂದಲೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಗುರುವಾರ ಬೆಳಗಿನ ವಹಿವಾಟಿನಲ್ಲಿ ಇಳಿಕೆ ಮುಂದುವರಿದಿದೆ. ಸತತ ಏರಿಕೆಯಾಗುತ್ತಿದ್ದ ಚಿನ್ನ ಬುಧವಾರದಿಂದ ಹತ್ತು ಗ್ರಾಂಗೆ 550 ರೂ. ನಷ್ಟು ದರ ಕಡಿಮೆಯಾಗಿದೆ. ತಯಾರಿಕರ ದರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಬದಲಾವಣೆಯಿಂದ ಕುಸಿತ ಸಂಭವಿಸಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಳಿತ ಕಂಡುಬರುತ್ತಿದ್ದರೂ, ಹೆಚ್ಚಾಗಿ ಅಮೆರಿಕದ ಡಾಲರ್‌ನ ಚಲನೆ ಮತ್ತು ಜಾಗತಿಕ ಆರ್ಥಿಕ ಸ್ಥಿತಿಗತಿಗಳ ಮೇಲೆ ಅವಲಂಬಿಸಿದೆ.
ಈ ವಾರಾಂತ್ಯದಲ್ಲಿ ಪ್ರಕಟವಾಗಲಿರುವ ಪ್ರಮುಖ ಅಮೆರಿಕದ ಆರ್ಥಿಕ ದತ್ತಾಂಶಕ್ಕಾಗಿ ವ್ಯಾಪಾರಿಗಳು ಕಾಯುತ್ತಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಿದರೆ, ಚಿನ್ನದ ಬೇಡಿಕೆ ಕಡಿಮೆಯಾಗಬಹುದು. ಡಾಲರ್ ಚಲನೆಯನ್ನು ಆಧರಿಸಿ ಚಿನ್ನದ ದರ ದುಬಾರಿಯಾಗುತ್ತದೆ. ಹಾಗೆಯೇ ರೂಪಾಯಿ ಹಿಗ್ಗಿದರೆ, ಚಿನ್ನದ ಬೆಲೆ ಇಳಿಯಬಹುದು.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಗುರುವಾರ ಜನವರಿ 8 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,800 (-27) ರೂ.ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,650 (-25) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,350 (-21) ರೂ. ಬೆಲೆಗೆ ತಲುಪಿದೆ.
2026ರ ಜನವರಿ 8ರ ಗುರುವಾರದಂದು ಭಾರತದ ವಿವಿಧ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,800 ರೂ. ಇದ್ದು, ಬುಧವಾರಕ್ಕೆ ಹೋಲಿಸಿದರೆ ದರದಲ್ಲಿ 27 ರೂ. ಕಡಿಮೆಯಾಗಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,650 ರೂ. ಇದ್ದು, ಬುಧವಾರಕ್ಕೆ ಹೋಲಿಸಿದರೆ ಗುರುವಾರ 25 ರೂ. ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಗುರುವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. 1 ಗ್ರಾಂ 24K ಚಿನ್ನದ ಬೆಲೆ ಇಂದು 13,800 ರೂ. ಆಗಿದ್ದು, ಬುಧವಾರ 13,827 ರೂ. ಇತ್ತು. ಅಂದರೆ 27 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಸ್ವಲ್ಪ ಕಡಿತವಾಗಿದೆ. 1 ಗ್ರಾಂ 22K ಚಿನ್ನದ ಬೆಲೆ ಗುರುವಾರ 12,650 ರೂ. ಆಗಿದ್ದು, ಬುಧವಾರ 12,675 ರೂ. ಇತ್ತು. ಇದರಿಂದ ದರದಲ್ಲಿ 25 ರೂ. ಕಡಿಮೆಯಾಗಿದೆ. ಗುರುವಾರ 18 ಕ್ಯಾರೆಟ್ ಚಿನ್ನದ ಬೆಲೆಯೂ ಕಡಿಮೆಯಾಗಿದೆ. 1 ಗ್ರಾಂ 18K ಚಿನ್ನದ ಬೆಲೆ ಇಂದು 10,350 ರೂ. ಆಗಿದ್ದು, ಬುಧವಾರ 10,371 ರೂ. ಇತ್ತು. ಇದರಿಂದ 21 ರೂ. ಕಡಿಮೆಯಾದಂತಾಗಿದೆ.
ಇಂದಿನ ಬೆಳ್ಳಿಯ ದರ (ಕೆಜಿಗೆ)
ಗುರುವಾರ ಭಾರತದಲ್ಲಿ ಬೆಳ್ಳಿಯ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 1 ಗ್ರಾಂ ಬೆಳ್ಳಿಯ ದರ ಇಂದು 252 ರೂ. ಆಗಿದ್ದು, ಬುಧವಾರ 257 ರೂ. ಇತ್ತು. ಅಂದರೆ 5 ರೂ. ಕಡಿಮೆಯಾಗಿದೆ.