ಚಿನ್ನದ ದರದಲ್ಲಿ ಮತ್ತೆ ಏರಿಕೆ : ಇಂದಿನ ದರ ಎಷ್ಟಿದೆ ?
ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 8,040 ರೂ.ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ ಚಿನ್ನದ ದರವು 64,320 ರೂ. ನಂತೆ ಮಾರಾಟವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಶುಕ್ರವಾರ 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 7,990ರೂ.ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ ಚಿನ್ನದ ದರವು 63,920ರೂ. ಇತ್ತು. ಶನಿವಾರ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 8,040ರೂ. ಆಗಿದ್ದು, 50 ರೂ. ಹೆಚ್ಚಳವಾಗಿದೆ.
ಶನಿವಾರ 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 8,771ರೂ.ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ ಚಿನ್ನದ ದರವು 70,168 ರೂ.ನಂತೆ ಮಾರಾಟವಾಗಿದೆ.
ದಿಲ್ಲಿಯಲ್ಲಿ ಶನಿವಾರ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 8,055ರೂ, ಇದ್ದು, 24 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 8,786 ರೂ. ತಲುಪಿದೆ.
ಚೆನ್ನೈನಲ್ಲಿ ಶನಿವಾರ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 8,040 ರೂ. ಇದ್ದು, 24 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 8,771ರೂ. ತಲುಪಿದೆ.
ಮುಂಬೈನಲ್ಲಿ ಶನಿವಾರ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 8,040 ರೂ. ಇದ್ದು, 24 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 8,771ರೂ. ತಲುಪಿದೆ.