×
Ad

ರಾಜ್ಯದಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ದೇಶದ ಚಿನಿವಾರ ಪೇಟೆಯಲ್ಲಿ ಏರಿಕೆ!

Update: 2025-03-15 13:36 IST

ಸಾಂದರ್ಭಿಕ ಚಿತ್ರ (credit: Grok)

ಹೊಸದಿಲ್ಲಿ: ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂ.ಗೆ 8220 ರೂ. ಗೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ. ಚಿನ್ನದ ದರವು 65760 ರೂ. ಗೆ ಮಾರಾಟವಾಗಿದೆ. ರಾಜ್ಯದ ಮಟ್ಟಿಗೆ ಚಿನ್ನದ ದರದಲ್ಲಿ ಅಲ್ಪ ಇಳಿಕೆ ಕಂಡಿದೆ ಎಂದು ಚಿನ್ನದ ವರ್ತಕರು ತಿಳಿಸಿದ್ದಾರೆ.

ಅಪ್ಪಟ ಚಿನ್ನ ಅಂದರೆ 24 ಕ್ಯಾರೆಟ್‌ ಚಿನ್ನವು ಬೆಂಗಳೂರಿನಲ್ಲಿ ಶನಿವಾರ ಒಂದು ಗ್ರಾಂ.ಗೆ 8967 ರೂ.ವಿನಂತೆ ಮಾರಾಟವಾಗಿದೆ. 10 ಗ್ರಾಂ.ಗೆ 89780 ರೂ.ವಿನಂತೆ ಚಿನ್ನಾಭರಣ ಪ್ರಿಯರು ಖರೀದಿಸಿದ್ದಾರೆ ಎಂದು ಬೆಂಗಳೂರಿನ ಚಿನಿವಾರ ಪೇಟೆಯ ವರದಿ ತಿಳಿಸಿದೆ.

ದೇಶದ ಅಪ್ಪಟ ಚಿನಿವಾರ ಪೇಟೆ ಹೇಗಿದೆ?

ದಿಲ್ಲಿಯಲ್ಲಿ ಶನಿವಾರ ಚಿನ್ನದ ದರ 10 ಗ್ರಾಂ ಗೆ 89963 ರೂ. ನಂತೆ ಮಾರಾಟವಾಗಿದೆ. ನಿನ್ನೆ ದಿಲ್ಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 88163 ರೂ. ಇತ್ತು.

ಚೆನ್ನೈನಲ್ಲಿ ಶನಿವಾರ ಚಿನ್ನದ ಬೆಲೆ 10 ಗ್ರಾಂ. ಗೆ 89810 ರೂ. ಗೆ ಮಾರಾಟವಾಗಿದೆ. ನಿನ್ನೆ ಅಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 88011 ರೂ. ಇತ್ತು.

ಮುಂಬೈನಲ್ಲಿ ಶನಿವಾರ ಚಿನ್ನದ ದರ 10 ಗ್ರಾಂ 89817 ರೂ. ಗೆ ಮಾರಾಟವಾಗಿದೆ. ಅಲ್ಲಿ ನಿನ್ನೆ ಚಿನ್ನದ ಬೆಲೆಯು 10 ಗ್ರಾಂ. ಗೆ 88017 ರೂ. ಇತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News