ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಇವತ್ತು ಚಿನ್ನದ ಬೆಲೆ ಎಷ್ಟು ?
ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತದ ಹಗ್ಗ ಜಗ್ಗಾಟ ಮತ್ತೆ ಮುಂದುವರಿದಿದ್ದು, ಶುಕ್ರವಾರ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದೆ.
ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಒಂದು ಗ್ರಾಂ ಆಭರಣ ಚಿನ್ನಕ್ಕೆ 110 ರೂ. ಏರಿಕೆಯಾಗಿ 8720 ರೂ.ವಿನಂತೆ ಮಾರಾಟ ಆಗಿದೆ. 8 ಗ್ರಾಂ ಚಿನ್ನಕ್ಕೆ 68720 ರೂ.ವಿನಂತೆ ಬಿಕರಿಯಾಗಿದೆ.
ಶುಕ್ರವಾರ ಚೆನ್ನೈನಲ್ಲಿ 10 ಗ್ರಾಂ ಆಭರಣ ಚಿನ್ನಕ್ಕೆ 86111 ರೂ.ವಿನಂತೆ ಮಾರಾಟ ಮಾಡಲಾಗಿದೆ. ಹೊಸದಿಲ್ಲಿಯ ಚಿನಿವಾರ ಪೇಟೆಯಲ್ಲಿ 86213 ರೂ.ವಿನಂತೆ 10 ಗ್ರಾಂ ಚಿನ್ನ ಮಾರಾಟವಾಗಿದೆ.
ಕೋಲ್ಕತ್ತಾದಲ್ಲಿ 10 ಗ್ರಾಂ. 22 ಕ್ಯಾರೆಟ್ ಚಿನ್ನಕ್ಕೆ 86115 ರೂ. ಇದ್ದರೆ, ಮುಂಬೈ ನಲ್ಲಿ 86117 ರೂ.ವಿನಂತೆ 10 ಗ್ರಾಂ ಆಭರಣ ಚಿನ್ನ ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದೇಶಗಳ ನಡುವಿನ ಆರ್ಥಿಕ ಸಂಘರ್ಷ, ಚಿನಿವಾರ ಪೇಟೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವುದು, ವಾಪಸ್ ತೆಗೆದುಕೊಳ್ಳುವುದರಲ್ಲಿ ತೊಡಗಿರುವುದರಿಂದ ಈ ಏರಿಳಿತ ಕಂಡು ಬರುತ್ತಿದೆ ಎಂದು ವಿಶ್ಲೇಷಿಸಲಾಗಿದೆ.