×
Ad

ಫೆಡ್ ದರ ಕಡಿತದ ನಿರೀಕ್ಷೆಯಲ್ಲಿ ಏರಿಳಿತ ಮುಂದುವರಿಸಿದ ಚಿನ್ನ

Update: 2025-12-09 11:56 IST

ಸಾಂದರ್ಭಿಕ ಚಿತ್ರ (AI)

ಭಾರತದಲ್ಲಿ ಚಿನ್ನದ ದರಗಳು ಮಂಗಳವಾರ ಮತ್ತೆ ಕುಸಿದಿವೆ. ಮಂಗಳವಾರ ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?

ಭಾರತದಲ್ಲಿ ಚಿನ್ನದ ದರಗಳು ಮಂಗಳವಾರ ಮತ್ತೆ ಕುಸಿದಿವೆ. ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ದರಗಳು, ಅಮೆರಿಕದ ಡಾಲರ್ ಏರಿಳಿತಗಳು ಮತ್ತು ಚಿನ್ನದ ಮೇಲಿನ ಆಮದು ಸುಂಕಗಳು ಸೇರಿದಂತೆ ಇತರ ವಿಷಯಗಳಿಂದ ಪ್ರಭಾವಿತವಾಗಿವೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?

ಮಂಗಳವಾರ ಡಿಸೆಂಬರ್ 9ರಂದು ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಮತ್ತೆ ಇಳಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ರೂ. 13,009 (-33), 22 ಕ್ಯಾರೆಟ್ ಚಿನ್ನಕ್ಕೆ ರೂ. 11,925 (-30) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,757 (- 25) ಬೆಲೆಗೆ ಕುಸಿದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ

ಭಾರತದಲ್ಲಿ 2025 ಡಿಸೆಂಬರ್ 9 ರಂದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ 129,400 ಕ್ಕೆ ತಲುಪಿತು. ಇದು ಅದರ ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ ರೂ 420 ಕುಸಿದಿದೆ. ಈ ನಡುವೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ 118,617 ಆಗಿದೆ.

ಶುಲ್ಕಗಳು, ಸುಂಕಗಳು ಮತ್ತು ತೆರಿಗೆಗಳನ್ನು ಹೊರತುಪಡಿಸಿ ನೋಡಿದರೆ ಭಾರತದಲ್ಲಿ ಚಿನ್ನದ ಬೆಲೆಗಳು ದುಬೈಗಿಂತ ಹೆಚ್ಚೇ ಮುಂದುವರಿದಿದೆ. ಮಂಗಳವಾರ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ 129,400 ಆಗಿದ್ದರೆ, ದುಬೈನಲ್ಲಿ ಇದು ರೂ 112,816 ರಷ್ಟಿದೆ. ಇದು ರೂ 16,584 ಅಥವಾ ಶೇ 14.70ರಷ್ಟು ವ್ಯತ್ಯಾಸವನ್ನು ತೋರಿಸುತ್ತದೆ. ಅದೇ ರೀತಿ, ಭಾರತದಲ್ಲಿ 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ದುಬೈನಲ್ಲಿ ಚಿನ್ನದ ಬೆಲೆಗೆ ಹೋಲಿಸಿದರೆ ಸುಮಾರು ಶೇ 14.70ರಷ್ಟು ದುಬಾರಿಯಾಗಿದ್ದವು.

ಫೆಡರಲ್ ಹಣಕಾಸು ನೀತಿಯ ನಿರೀಕ್ಷೆ

ಒಂದು ದಿನದ ನಂತರ ಅಮೆರಿಕದ ಫೆಡರಲ್ ರಿಸರ್ವ್ ನೀತಿಯ ನಿಲುವನ್ನು ಪ್ರಕಟಿಸುವ ಸಾಧ್ಯತೆಯಿರುವ ಕಾರಣ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಸ್ವಲ್ಪ ಕುಸಿದಿವೆ. ಫೆಡರಲ್ ಹಣಕಾಸು ನೀತಿ ನೇರವಾಗಿ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪವೆಲ್ ದರ ಕಡಿತವಿಲ್ಲ ಎನ್ನುವುದನ್ನೇ ಹೇಳುತ್ತಾ ಬಂದಿದ್ದರೂ, ಇತರ ಅನೇಕ ಫೆಡ್ ಅಧಿಕಾರಿಗಳು ಆರ್ಥಿಕ ಸಡಿಲಿಕೆಯ ಮಾತನಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News