×
Ad

ಪ್ರತಿ 10 ಗ್ರಾಂಗೆ 1.13 ಲಕ್ಷ ರೂಪಾಯಿ ತಲುಪಿದ ಚಿನ್ನದ ದರ!

ಮತ್ತೆ 250 ರೂಪಾಯಿ ಏರಿಕೆ ಕಂಡ ಹಳದಿ ಲೋಹ

Update: 2025-09-10 20:22 IST

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಜಗತ್ತಿನಾದ್ಯಂತ ಕೇಂದ್ರೀಯ ಬ್ಯಾಂಕ್ ಗಳು ಸದೃಢ ಖರೀದಿಯಲ್ಲಿ ತೊಡಗಿದ್ದರಿಂದ, ಡಾಲರ್ ದುರ್ಬಲಗೊಂಡಿದ್ದರಿಂದ ಹಾಗೂ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ಚಿನ್ನದ ದರ ಇಂದು ಪ್ರತಿ 10 ಗ್ರಾಂಗೆ 250 ರೂ. ಏರಿಕೆ ಕಂಡಿದ್ದು, 1,13,000 ರೂ. ತಲುಪಿದೆ.

ಈ ವರ್ಷದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 34,050 ರೂ. ಅಥವಾ ಶೇ. 43.12ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ ಚಿನ್ನದ ದರ ಪ್ರತಿ 10 ಗ್ರಾಂಗೆ 78,950 ರೂ. ಇತ್ತು.

ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಪ್ರಕಾರ, ಮಂಗಳವಾರದ ವಹಿವಾಟು ಅಂತ್ಯಗೊಂಡಾಗ, ಚಿನ್ನದ ದರ ಪ್ರತಿ 10 ಗ್ರಾಂಗೆ 5,080 ರೂ. ಏರಿಕೆ ಕಂಡು, 1,12,750 ರೂ. ತಲುಪಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅಬನ್ಸ್ ಫೈನಾನ್ಷಿಯಲ್ ಸರ್ವೀಸಸ್ ನ ಸಿಇಒ ಚಿಂತನ್ ಮೆಹ್ತಾ, “ಅಮೆರಿಕದ ಡಾಲರ್ ದುರ್ಬಲಗೊಂಡಿರುವುದು ಹಾಗೂ ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಬಿಗಡಾಯಿಸುತ್ತಿರುವುದು ಚಿನ್ನದ ದರಕ್ಕೆ ಹೆಚ್ಚುವರಿ ಬಲವನ್ನು ತುಂಬಿದೆ” ಎಂದು ಹೇಳಿದ್ದಾರೆ.

ಈ ನಡುವೆ, ದಾಖಲೆಯ ದರದಿಂದ ಇಳಿಮುಖವಾಗಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 300 ರೂಪಾಯಿ ಇಳಿಕೆಯಾಗಿದ್ದು, ಬುಧವಾರ ಪ್ರತಿ ಕೆಜಿಗೆ ಎಲ್ಲ ತೆರಿಗೆಗಳೂ ಸೇರಿ 1,28,500 ರೂಪಾಯಿ ತಲುಪಿದೆ. ಹಿಂದಿನ ದಿನವಾದ ಮಂಗಳವಾರ ಪ್ರತಿ ಕೆಜಿ ಬೆಳ್ಳಿಯ ದರ ಪ್ರತಿ ಕೆಜಿಗೆ 1,28,800 ರೂ. ಇತ್ತು ಎಂದು ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News